ಉಡುಪಿ ಪರ್ಯಾಯಕ್ಕೆ ಅದಮ್ಯ ಚೇತನದ 12000 ಸ್ಟೀಲ್ ತಟ್ಟೆಗಳು

ಉಡುಪಿಯ ಪ್ರತಿಷ್ಠಿತ ಪರ್ಯಾಯ ಮಹೋತ್ಸವಕ್ಕೆ ಅದಮ್ಯ ಚೇತನ ಸಂಸ್ಥೆಯು ೧೨,೦೦೦ ಸ್ಟೇನ್ಲೆಸ್ ಸ್ಟೀಲ್ ತಟ್ಟೆಗಳನ್ನು ಕಳುಹಿಸಿಕೊಡುತ್ತಿದೆ!

ಅದಮ್ಯ ಚೇತನ ಸಂಸ್ಥೆಯ 'ಅನಂತ ಪ್ಲೇಟ್ ಬ್ಯಾಂಕ್' ಯೋಜನೆಯ ಮೂಲಕ ಬಳಸಿ ಬಿಸಾಡುವ ತಟ್ಟೆಗಳ ಬದಲು ಮರುಬಳಕೆಯ ತಟ್ಟೆಗಳನ್ನು ಒದಗಿಸುತ್ತಿದೆ. ಇದರಿಂದ ನೂರಾರು ಟ್ರಕ್ ಲೋಡ್‌ಗಳಷ್ಟು ಕಸ ಉತ್ಪತ್ತಿಯಾಗುವುದನ್ನು ತಡೆಗಟ್ಟಲಾಗುತ್ತಿದೆ. ಈ ಭವ್ಯ ದ್ವೈವಾರ್ಷಿಕ ಪರ್ಯಾಯ ಆಚರಣೆಯ ಸಂದರ್ಭದಲ್ಲಿ ಪವಿತ್ರ ಉಡುಪಿ ನಗರವನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಡಲು ಇದು ಒಂದು ಪುಟ್ಟ ಕಾಣಿಕೆ.

ಗವಿಪುರಂನಲ್ಲಿರುವ ಅದಮ್ಯ ಚೇತನ ಸಂಸ್ಥೆಯ 'ಅನ್ನಪೂರ್ಣ' ಹಸಿರು ಅಡುಗೆಮನೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಖುದ್ದಾಗಿ ಈ ತಟ್ಟೆಗಳ ಸ್ವಚ್ಛತೆ, ಎಣಿಕೆ ಮತ್ತು ಪ್ಯಾಕಿಂಗ್ ಕಾರ್ಯದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅದಮ್ಯ ಚೇತನ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಅನಂತಕುಮಾರ್ ಜೀ ಅವರ ದೂರದೃಷ್ಟಿಯಂತೆ, ಅದಮ್ಯ ಚೇತನ ಸಂಸ್ಥೆಯು ಸುಸ್ಥಿರ ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವುದನ್ನು ಮುಂದುವರಿಸುತ್ತಿದೆ.

ಈಗಾಗಲೇ ೩೨ಕ್ಕೂ ಹೆಚ್ಚು ಪ್ಲೇಟ್ ಬ್ಯಾಂಕ್‌ಗಳು ಸಕ್ರಿಯವಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆಯನ್ನು ೫೦ಕ್ಕೇರಿಸುವ ಗುರಿ ಅದಮ್ಯ ಚೇತನ ಸಂಸ್ಥೆಯಾಗಿದೆ! 

ಉಚಿತವಾಗಿ ತಟ್ಟೆಗಳನ್ನು ಪಡೆಯಲು ಅಥವಾ ನಿಮ್ಮ ಪ್ರದೇಶದಲ್ಲಿ ಪ್ಲೇಟ್ ಬ್ಯಾಂಕ್ ಪ್ರಾರಂಭಿಸಲು ಹೆಚ್ಚಿನ ಮಾಹಿತಿಗಾಗಿ www.adamyachetana.org ಗೆ ಭೇಟಿ ನೀಡಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು