ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ದಿಗಂಬರ ಶ್ರೀ ಗಿರಿ ಮಹಾರಾಜ್ ಬೇಟಿ


ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರಕ್ಕೆ ಹೆಸರಾಂತ ನಾಗಸಾಧು ದಿಗಂಬರ ಶ್ರೀ ಶ್ರೀ ಗಿರಿ ಕೃಷ್ಣ ಮಹಾರಾಜ್ ಭೇಟಿ ನೀಡಿದರು.

 ಕ್ಷೇತ್ರದ ಧರ್ಮದರ್ಶಿಗಳು ಶ್ರೀ ರಮಾನಂದ ಗುರೂಜಿ ಅವರು ಸಾಂಪ್ರದಾಯಿಕವಾಗಿ ಶ್ರೀಯುತರನ್ನು ಸ್ವಾಗತಿಸಿ ಬರಮಾಡಿಕೊಂಡರು. ಪೂರ್ವಾಶ್ರಮದಲ್ಲಿಎಂ ಟೆಕ್ ಪದವಿಯನ್ನು ಹೊಂದಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು ದಯವಿಟ್ಟು ಪ್ರೇರಣೆಯಂತೆ ಎಲ್ಲವನ್ನು ತ್ಯಜಿಸಿ ಆಧ್ಯಾತ್ಮಿಕ ಸಾಧನೆಯ ಒಲವಿನಿಂದ ಹಿಮಾಲಯದಲ್ಲಿ ಕಠಿಣ ತಪಸ್ಸನ್ನಾಚರಿಸಿ, ನಾಗಸಾಧು ಆಗಿ ಪರಿವರ್ತಿತ ಗೊಂಡ ಇವರು ಪ್ರಯಾಗ್ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಅಚ್ಚರಿ ಹುಟ್ಟಿಸಿ, ಎಂ ಟೆಕ್ ಬಾಬಾ ಎಂದೇ ಹೆಸರುವಾಸಿಯಾಗಿದ್ದರು. ಅಂತಹ ಮಹಾನ್ ತಪಸ್ವಿಗಳ ಆಶೀರ್ವಾದವನ್ನು ಪಡೆಯಲು ಶ್ರೀ ಕ್ಷೇತ್ರದ ಭಕ್ತ ಸಮೂಹ ಹಾಗೂ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕಿಯರು ಹಾಗೂ ಸಾರ್ವಜನಿಕರು ಕ್ಷೇತ್ರದಲ್ಲಿ ನೆರೆದಿದ್ದರು.

 ಕ್ಷೇತ್ರದ ಆದಿಶಕ್ತಿ ಸಭಾಭವನದಲ್ಲಿ ಆಯೋಜಿಸಿದ ಧರ್ಮಸಭೆಯಲ್ಲಿ ಬಾಬಾ ಗಿರಿ ಮಹಾರಾಜ ಅವರು ಆಶೀರ್ವಚನ ನೀಡಿದರು.

 ಅತ್ಯಂತ ಪ್ರಭಾವಶಾಲಿಯಾಗಿ ಸಾನಿಧ್ಯ ಹೊಂದಿರುವ ಶ್ರೀ ಕ್ಷೇತ್ರ ಶಕ್ತಿ ಸಂಚಯನ ಕ್ಷೇತ್ರವಾಗಿದೆ.. ಸಕಾರಾತ್ಮಕ ಇಂದ ಮನಸ್ ಶಾಂತಿ ಲಭಿಸುತ್ತದೆ.. ಕ್ಷೇತ್ರದ ಶಕ್ತಿಗಳು ಚೈತನ್ಯದಿಂದ ತುಂಬಿ ಬಂದ ಭಕ್ತಾದಿಗಳಿಗೆ ಅನುಗ್ರಹಿಸುವುದರಲ್ಲಿ ಸಂಶಯವೇ ಇಲ್ಲ... ಇಂತಹ ಮಹಾನ್ ಕ್ಷೇತ್ರ ನಿರ್ಮಾತೃವಾದ ರಮಾನಂದ ಗುರೂಜಿ ಅವರು ಖಂಡಿತವಾಗಿಯೂ ಗತಕಾಲದ ಮುನಿಶ್ರೇಷ್ಠರೇ ಸರಿ.. ಅವರ ಅಜನ್ಮ ತಪಸ್ಸಿನ ಫಲ ವೇ ಈ ಕ್ಷೇತ್ರ ನಿರ್ಮಾಣಕ್ಕೆ ನಾಂದಿ ಎಂದರು.

 ಕ್ಷೇತ್ರದ ಕಪಿಲ ಮಹರ್ಷಿಗಳ ಸಾನಿಧ್ಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳವರು ತಾವು ವಾಸ್ತವ್ಯವಿರುವ ಉತ್ತರ ಕಾಶಿಯಲ್ಲಿಯೂ ಕಪಿಲ ಮಹರ್ಷಿಗಳ ಸನ್ನಿಧಾನ ವಿರುವುದು ಆಗಿ ತಾವು ಅಲ್ಲಿಯೇ ವಾಸವಿರುವುದರಿಂದ ಆ ಗುರುವಿನ ಅನುಗ್ರಹವೇ ನಾನು ಇಲ್ಲಿ ಬರಲು ಪ್ರೇರಣಾ ಶಕ್ತಿಯಾಗಿದೆ ಎಂದರು.

 ಕ್ಷೇತ್ರದ ವತಿಯಿಂದ ಶ್ರೀ ಗಿರಿ ಕೃಷ್ಣ ಮಹಾರಾಜ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು... ನೆರೆದಂತಹ ಭಕ್ತರುಗಳಿಗೆ ತನ್ನ ಅಮೃತ ಹಸ್ತದಿಂದ ಆಶೀರ್ವಾದ ನೀಡಿ ಪ್ರಸಾದ ವಿತರಿಸಿದರು.

 ಮಧ್ಯಾಹ್ನದ ಮಹಾಪೂಜೆಯಲ್ಲಿ ಪಾಲ್ಗೊಂಡು ಕ್ಷೇತ್ರದ ಮಹಾಪ್ರಸಾದವಾದ ಅನ್ನಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು.

 ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ಸುಧೀರ್ ಮರಾಠೆ ಅವರು ನಿರೂಪಿಸಿದರು. ಕ್ಯಾತ ಜ್ಯೋತಿಷಿಗಳು ಅರ್ಚಕರು ಆದ ಶ್ರೀಯುತ ಅಭಿಷೇಕ್ ಬಾಯರಿ, ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲಿ ಶ್ರೀಮತಿ ಉಷಾ ರಾಮನನ್ಡ್, ಉದ್ಯಮಿ ದಿನೇಶ್ ಉದ್ಯಾವರ, ಅಲಂಕಾರ ತಜ್ಞ ಆನಂದಬಾರಿ, ಅರ್ಚಕ ಅನೀಶ್ ಆಚಾರ್ಯ, ಬೆನ್ನಿ ಡೈಯಿಂಗ್ ನ ಶ್ರೀಯುತ ಶಶಿಧರ್ ಸಾಲಿಯಾನ್, ಶಕ್ತಿ ಯೋಗ ಕೇಂದ್ರದ ಶ್ರೀಯುತ ಸ್ವಸ್ತಿಕಾಚಾರ್ಯ ಹಾಗೂ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು