ಖ್ಯಾತ ರಂಗೋಲಿ ಕಲಾವಿದೆ ಸಂಶೋಧಕಿ ಡಾ.ಭಾರತಿ ಮರವಂತೆಯವರಿಗೆ "ರಾಜ್ಯೋತ್ಸವ ಪ್ರಶಸ್ತಿ- 2025"

ಉಡುಪಿ: ಖ್ಯಾತ ರಂಗೋಲಿ ಕಲಾವಿದೆ ಸಂಶೋಧಕಿ ಡಾ.ಭಾರತಿ ಮರವಂತೆಯವರಿಗೆ ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ ಧಾರವಾಡದವರು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ "ರಾಜ್ಯೋತ್ಸವ ಪ್ರಶಸ್ತಿ- 2025" ನ್ನು ಧಾರವಾಡದಲ್ಲಿ ನೀಡಿ ಗೌರವಿಸಿದರು. ಜೆ.ಎಸ್.ಎಸ್.ಹಾಲಭಾವಿ ಸ್ಕೂಲ್ ಆಫ್ ಆರ್ಟ್ ನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.

ಭಾರತಿ ಮರವಂತೆ ಅವರು ರಂಗೋಲಿಯಲ್ಲಿ ಸಂಶೋಧನೆ, ರಂಗೋಲಿ ಪೈಂಟಿಂಗ್, ರಂಗೋಲಿ ಪ್ರದರ್ಶನ ಪ್ರಾತ್ಯಕ್ಷಿಕೆ, ಶ್ರೀ ರಂಗೋಲಿ ಪತ್ರಿಕೆ, ಲೇಖನಗಳು, ಉಪನ್ಯಾಸ, ಕೃತಿಗಳು, ನಿಘಂಟು, ಕಿರುಯೋಜನೆಗಳು, ರಂಗೋಲಿಯಲ್ಲಿ ವಿಶ್ವದಾಖಲೆ, ಕಲಾವಿದರ ಫೆಲೋಶಿಪ್, ಸ್ವರಚಿತ ರಂಗೋಲಿ ಇತ್ಯಾದಿ ಕಲಾಕ್ಷೇತ್ರದ ಕೆಲಸಕ್ಕಾಗಿ ಈ ಪ್ರಶಸ್ತಿ ಬಂದಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಅನುಭವವಿರುವ ಇವರು ಪ್ರಸ್ತುತ ಡಾ.ಶಿವರಾಮ ಕಾರಂತ ಟ್ರಸ್ಟ್‌ ನಲ್ಲಿ ಸದಸ್ಯೆಯಾಗಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು