ಉಡುಪಿ: ಇಂದಿನ ಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ. ಜೀವನ ಪದ್ದತಿಯಲ್ಲಿ ಆಧುನಿಕತೆ ಅತಿಯಾಗಿ ಅಳವಡಿಸಿಕೊಂಡ ಪರಿಣಾಮವಾಗಿ ಸಂಸ್ಕೃತಿಯನ್ನು ಮರೆಯುತ್ತಿರುವುದು ದುರಂತ ಎಂದು ಕೇಮಾರು ಸಾಂದೀಪನಿ ಮಠದ ಶ್ರೀ ಈಶವಿಠ್ಠಲದಾಸ ಸ್ವಾಮೀಜಿ ತಿಳಿಸಿದರು.
ಅವರು ಶನಿವಾರ ಸಂತೆಕಟ್ಟೆಯ ಗೋಪಾಲಪುರದ ಶಿರೂರು ಮಠದ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.
ಶಂಕರ್ ಶೆಟ್ಟಿ ಪುತ್ತೂರು, ವಿನೋದ್ ಕುಮಾರ್, ಹಿಂದೂ ಸಂಗಮ ಉಡುಪಿ ನಗರ ಸಂಯೋಜಕ ಮುರುಳಿ ಪೆರಂಪಳ್ಳಿ ಉಪಸ್ಥಿತರಿದ್ದರು.
ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು ಪ್ರಾಸ್ತಾವಿಕ ಮಾತನಾಡಿದರು. ಶಿವಪ್ರಸಾದ್ ಮಲೆಬೆಟ್ಟು ದಿಕ್ಸೂಚಿ ಭಾಷಣ ಮಾಡಿದರು. ಕಿಶೋರ್ ಸ್ವಾಗತಿಸಿ, ಸಂದೇಶ್ ಶೆಟ್ಟಿ ವಂದಿಸಿದರು. ಅಕ್ಷಯ್ ಹೆಗ್ಡೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಮೇಘನ ಮತ್ತು ಮಂಜರಿ ಚಂದ್ರ ಇವರ ತಂಡದಿಂದ ನೃತ್ಯ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

0 ಕಾಮೆಂಟ್‌ಗಳು