ಥ್ರೆಡ್ ಆರ್ಟ್ ಎಂಬುದು ದಾರಗಳನ್ನು ಬಳಸಿ ಭಾವಚಿತ್ರವನ್ನು ರಚಿಸುವ ವಿಶಿಷ್ಟ ಹಾಗೂ ಅಪೂರ್ವ ಕಲಾ ಪ್ರಕಾರವಾಗಿದೆ. ಇದು ಕುಂಚದ ಮೂಲಕ ಚಿತ್ರ ಬಿಡಿಸುವ ಸಾಮಾನ್ಯ ವಿಧಾನವಲ್ಲ; ಬದಲಾಗಿ, ಅನೇಕ ದಾರಗಳನ್ನು ನಿಖರವಾಗಿ ಹೆಣೆದು ಭಾವಚಿತ್ರವನ್ನು ರೂಪಿಸುವ ಅದ್ಭುತ ಕಲೆ.
ಶ್ರೀಯುತ ಜಯಕರ್ ಶೆಟ್ಟಿ ಇಂದ್ರಾಳಿ ಅವರು ವಿಶೇಷ ಆಸಕ್ತಿ ವಹಿಸಿ ಮಾಡಿಸಿದ, ಪೂಜ್ಯನೀಯ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಥ್ರೆಡ್ ಆರ್ಟ್ ಕಲಾಕೃತಿಯನ್ನು ಇಂದು ಭಕ್ತಿಪೂರ್ವಕವಾಗಿ ಸಮರ್ಪಿಸುತ್ತಿದ್ದಾರೆ. ಈ ಕಲಾಕೃತಿಯನ್ನು ಶ್ರೀ ಪ್ರಶಾಂತ್ ಶ್ರೀಯಾನ್ ಮದಗ ಅವರು ತಮ್ಮ ಕೌಶಲ್ಯದಿಂದ ಸುಮಾರು 4500ಕ್ಕೂ ಅಧಿಕ ಸುತ್ತುಗಳ ದಾರಗಳನ್ನು ನಿಖರವಾಗಿ ಹೆಣೆದು, ಸ್ವಾಮೀಜಿಯವರ ಸುಂದರ ಹಾಗೂ ಭಾವಪೂರ್ಣ ಚಿತ್ರಣವನ್ನು ಸೃಷ್ಟಿಸಿದ್ದಾರೆ.
"ತ್ಯಾಗ, ತಪಸ್ಸು ಮತ್ತು ತತ್ವಜ್ಞಾನದ ಸಂಕೇತವಾದ ಪವಿತ್ರ ಕಾವಿ ವಸ್ತ್ರಧಾರಿ, ಧಾರ್ಮಿಕ ಯೋಗಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಅನುಗ್ರಹಕ್ಕೆ ಪ್ರತೀಕವಾಗಿ ಈ ಕಾವಿ ವರ್ಣದ ಭಾವಚಿತ್ರಣವನ್ನು ಅತೀವ ಭಕ್ತಿಭಾವದಿಂದ ಸಮರ್ಪಿಸುತ್ತಿದ್ದೇವೆ.”


0 ಕಾಮೆಂಟ್‌ಗಳು