ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 124ನೇ ವರ್ಷದ ವಾರ್ಷಿಕೋತ್ಸವ

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾoಗದಗಡಿ, ಉಡುಪಿ ಇದರ 124ನೇ ವರ್ಷದ ಶಾಲಾ ವಾರ್ಷಿಕೋತ್ಸವವು ಅಮರ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ಜರಗಿತು. ಸಭಾಧ್ಯಕ್ಷರಾಗಿ ಜಯಕರ ಶೆಟ್ಟಿ ಪಳ್ಳಿ ಕಾವೇರಿಬೆಟ್ಟು, ಹಳೆ ವಿದ್ಯಾರ್ಥಿ ಅತಿಥಿಗಳಾಗಿ ರಘುಪತಿ ಭಟ್, ಐವನ್ ಪುರ್ಟಡೋ, ಡಾ/ ಪ್ರತಿಮಾ ಜೆ ಆಚಾರ್ಯ, ಹಾಜಿ ಎಂ ಇಕ್ಬಾಲ್ ಆಡಳಿತ ಸಮಿತಿಯ ಪರವಾಗಿ ಡೇನಿಸ್ ಕರ್ನೇಲಿಯೊ ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲಿಯೊ ಶಾಲಾ ವಿದ್ಯಾರ್ಥಿ ನಾಯಕಿ ರಾಯಿಷಾ ರಫೀದ ಹಳೆ ವಿದ್ಯಾರ್ಥಿ ಸಂಘದ ಸುವರ್ಣನಿಧಿ ಅಧ್ಯಕ್ಷರಾದ ರಾಮಚಂದ್ರ ಆಚಾರ್ಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಬಾರಿತ್ತಾಯ ಕಾರ್ಯದರ್ಶಿ ಬಾಲಚಂದ್ರ ಗಾoಸ್ಕರ್ ಶಿಕ್ಷಕರಕ್ಷಕ ಸಂಘದ ಕವಿತಾ ಶೆಟ್ಟಿ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸ್ವಾಗತಿಸಿ, ಶಾಲಾ ವರದಿಯನ್ನು ಮುಖ್ಯೋಪಾಧ್ಯಾಯರು ವಾಚಿಸಿದರು ಸಂಘದ ವರದಿಯನ್ನು ಕಾರ್ಯದರ್ಶಿ ವಾಚಿಸಿದರು. ಪ್ರಸ್ತುತ ನಿವೃತ್ತಿ ಹೊಂದಿದ ಶಾಲಾ ದೈಹಿಕ ಶಿಕ್ಷಕರಾದ ರಾಮಪ್ಪ ಎಸ್ ದೊಡ್ಮನಿ ಹಾಗೂ ಕರಂಬಳ್ಳಿ ವಾರ್ಡಿನ ನಿಕಟಪೂರ್ವ ನಗರಸಭಾ ಸದಸ್ಯರಾದ ಕೆ ಗಿರಿಧರ್ ಆರ್ಚಾರ್ಯರನ್ನು ಅವರು ನೀಡಿದ ಸೇವೆಗಾಗಿ ಸನ್ಮಾನಿಸಲಾಯಿತು.  ಶ್ರೀಮತಿ ಶ್ಯಾಮಲ ಕೆ ಮತ್ತು ದಿನೇಶ ಆಚಾರ್ಯರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನ ಪತ್ರ ಮತ್ತು ಅಭಿನಂದನ ಪತ್ರವನ್ನು ಲಕ್ಷ್ಮೀನಾರಾಯಣ ಬಿ ಆಚಾರ್ಯ ಕಮಲಾಕ್ಷ ಶೇಟ್ ಮಹಮ್ಮದ್ ಸಿದ್ಧಿಕ್ ಕುಮಾರಿ ಸಮಿತ ವಾಚಿಸಿದರು.  ಹರೀಶ್ ಕರಂಬಳ್ಳಿ ಸಂಪೂರ್ಣ ಸಹಕಾರ ನೀಡಿದರು.

  ಸಂಘದ ಹಳೆ ವಿದ್ಯಾರ್ಥಿಗಳಿಗಾಗಿ ನಡೆಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರ ಪಟ್ಟಿಯನ್ನು ಕ್ರೀಡಾ ಕಾರ್ಯದರ್ಶಿ ಕೃಷ್ಣಮೂರ್ತಿ ಆಚಾರ್ಯ ವಾಚಿಸಿ ಬಹುಮಾನ ನೀಡಲಾಯಿತು. ನಂತರ 125ನೇ ವರ್ಷಾಚರಣೆಯ ಲಾಂಛನವನ್ನು ನಿಕಟಪೂರ್ವ ಶಾಸಕರಾದ ಕೆ ರಘುಪತಿ ಭಟ್ ಬಿಡುಗಡೆಗೊಳಿಸಿದರು. 125ನೇ ವರ್ಷದ ಯೋಜನೆಯನ್ನು ವಿಸ್ತೃತವಾಗಿ ಸಾಂಸ್ಕೃತಿಕ ಕಾರ್ಯದರ್ಶಿಯಾದ ಶ್ರೀ ಕೃಷ್ಣ ಸಿ ಇವರು ವಾಚಿಸಿದರು ಕಾರ್ಯಕ್ರಮವನ್ನು ಸಚೇಂದ್ರ ಕಕ್ಕುಂಜೆಯವರು ನಿರೂಪಿಸಿ ಸದಾನಂದ ನಾಯಕ್ ಧನ್ಯವಾಧ ನೀಡಿಧರು. ವೇದಿಕೆಯಲ್ಲಿ ಶಾಲಾ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು, ಹಳೆ ವಿದ್ಯಾರ್ಥಿಗಳಿಂದ ವಿಕ್ರಂ ಮಂಚಿ ರಚಿಸಿ ನಾಗರಾಜ ವರ್ಕಾಡಿ ನಿರ್ದೇಶನದ ಎನ್ನಿನಿ ಬೇತೆ ಆಯಿನಿ ಬೇತೆ ಎಂಬ ನಾಟಕ ಪ್ರದರ್ಶಿಸಲಾಯಿತು. ಹಾಗೂ ಹಳೆವಿದ್ಯಾರ್ಥಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಮುಂಬರುವ 125ನೇ ವರ್ಷವನ್ನು ಸಂಭ್ರಮದಲ್ಲಿ ಆಚರಿಸೋಣವೆಂದು ಶುಭ ಹಾರೈಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು