ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು : ವಿದ್ಯಾರ್ಥಿ ಸಂಘದ ದಿನ ಹಾಗೂ ಪ್ರತಿಭಾ ದಿನಾಚರಣೆ

‘ಪ್ರತಿಭೆಯೊಂದು ಸೃಜನಶೀಲತೆಯಲ್ಲಿ ಬೆರೆತಿರುತ್ತದೆ. ಅದು ಬೆಳಗಲು ನಾಲ್ಕು ಗೋಡೆ ಮಧ್ಯದ ಶಿಕ್ಷಣ ಮಾತ್ರ ಸಾಲದು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಅಧ್ಯಯನಕ್ಕೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ‘ಚಿನ್ನಕ್ಕೆ ಪರಿಮಳ ಬಂದoತೆ’ ಪ್ರತಿಭೆ ವಿಕಾಸವಾಗುತ್ತದೆ’ ಎಂದು ವಿಶ್ರಾಂತ ಪ್ರಾಧ್ಯಾಪಕ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ದಿನ ಹಾಗೂ ಪ್ರತಿಭಾ ದಿನಾಚರಣೆಯ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ ಶ್ರೀಯುತರು ‘ಅನುಕರಣ ಬೇಡ, ಸ್ವಂತಿಕೆ ಬೆಳೆಸಿಕೊಳ್ಳಿ. ಒತ್ತಡದಿಂದ ಕಲಿಕೆ ಕುಂಟುತ್ತದೆ; ಸಾಮಾನ್ಯ ಜ್ಞಾನ ಆರನೇ ಇಂದ್ರಿಯವಿದ್ದAತೆ; ಶಿಕ್ಷಣದ ಅಂತಿಮ ಗುರಿ ನಮ್ಮ ಒಳಗಣ್ಣನ್ನು ತೆರೆಸಿ ಬೆಳಕಿನೆಡೆ ತಿರುಗಿಸುವುದು’ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಕುಮಾರ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಉಪನ್ಯಾಸಕ ಹೆಲ್ವಿನ್ ಫೆರ್ನಾಂಡಿಸ್, ಉಪನ್ಯಾಸಕಿ ಸುಧಾ ಕೆ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ|ಶ್ರೀರಮಣ ಐತಾಳ್‌ರವರು ಮಾತನಾಡುತ್ತಾ, ‘ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸಾಧನೆಯೊಂದಿಗೆ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕು. ಬದಲಾವಣೆ ಅನ್ನುವುದು ಮುಖ್ಯ. ಸಕಾರಾತ್ಮಕ ಬದಲಾವಣೆಯಿಂದ ಪ್ರಗತಿ ಸಾಧ್ಯ. ನಿಮ್ಮ ಗುರಿಯನ್ನು ಮರು ವ್ಯಾಖ್ಯಾನಿಸಿ ಅದನ್ನು ಸಾಧಿಸಲು ಯತ್ನಿಸಬೇಕು’ ಎಂದರು.

೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಸಂಘದ ವರದಿಯನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದೀಪ್ತಿ, ಕ್ರೀಡಾ ವರದಿಯನ್ನು ಕ್ರೀಡಾ ಕಾರ್ಯದರ್ಶಿ ನಿಧಿ ಶೆಟ್ಟಿ ವಾಚಿಸಿದರು. ಇದೇ ಸಂದರ್ಭದಲ್ಲಿ ಸಾಂಸ್ಕöÈತಿಕ ಸ್ಪರ್ಧೆ, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದ ಶೈಕ್ಷಣಿಕ ಸಾಧಕರನ್ನು, ಸಿ.ಎ., ಸಿಎಸ್, ಸಿಎಮ್‌ಎ ಫೌಂಡೇಶನ್ ನಲ್ಲಿ ಉತ್ತೀರ್ಣರಾದವರನ್ನು ಗೌರವಿಸಲಾಯಿತು. ೨೦೨೫-೨೬ನೇ ಸಾಲಿನಲ್ಲಿ ಕಾಲೇಜಿನಲ್ಲಿ ಓದುತ್ತಿರುವ ಉತ್ಕöÈಷ್ಟ ಅಂಕ ಗಳಿಸಿದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ೨೦೨೪-೨೫ನೇ ಸಾಲಿನಲ್ಲಿ ಪದವಿಪೂರ್ವ ಅಂತಿಮ ಪರೀಕ್ಷೆಯಲ್ಲಿ ೯೫ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವೈಷ್ಣವಿ ಆಚಾರ್ಯ ಸ್ವಾಗತಿಸಿದರು. ಸಾಂಸ್ಕöÈತಿಕ ಸಂಘದ ಕಾರ್ಯದರ್ಶಿ ಸಿಯಾ ಶೆಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಡಿಯೋನ್ ಹೇಡ್ರಿಯಲ್ ಸೋನ್ಸ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು