BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಮಂಥನ

ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರ ‘ಪಂಜುರ್ಲಿ’ ಕೃತಿ ಬಿಡುಗಡೆ

ಉಡುಪಿ: ಮಂಗಳೂರಿನ ಕಥಾಬಿಂದು ಪ್ರಕಾಶನದ ವತಿಯಿಂದ ಪಾಣೆಮಂಗಳೂರು ಭಯಂಕೇಶ್ವರ ದೇವಸ್ಥಾನದಲ್ಲಿ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ-೨೦೨೬ ಕಾರ್ಯಕ್ರಮದಲ್ಲಿ ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಅವರು ಬರೆದಿರುವ ‘ಪಂಜುರ್ಲಿ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. 

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿ ಕೃತಿಯನ್ನು ಬಿಡುಗಡೆ ಮಾಡಿದರು. ತುಳುನಾಡಿನ ಪ್ರಾಚೀನ ದೈವ ಪಂಜುರ್ಲಿಯ ಕುರಿತು ಪ್ರಕಾಶ ಸುವರ್ಣ ಕಟಪಾಡಿ ಅವರು ಅಧ್ಯಯನ ನಡೆಸಿ ಬರೆದಿರುವ ಪಂಜುರ್ಲಿ ಕೃತಿ ಮೌಲ್ಯಯುತವಾಗಿದ್ದು, ಈ ಕೃತಿ ಯುವಪೀಳಿಗೆಗೆ ದೈವಾರಾಧನೆಯ ಕುರಿತು ಸ್ಪಷ್ಟ ಚಿತ್ರಣ ನೀಡಲಿದೆ ಎಂದರು. ಭಯಂಕೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ರಘುನಾಥ್ ಸೋಮಯಾಜಿ, ಮೂಡುಬಿದ್ರಿ ಉದ್ಯಮಿ ಶ್ರೀಪತಿ ಭಟ್, ಹಿರಿಯ ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್, ತೇವು ತಾರನಾಥ ಕೊಟ್ಟಾರಿ, ಬಂಟ್ವಾಳ ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಜಯಾನಂದ ಪೆರಾಜೆ, ಡಾ.ಶಾಂತಾ ಪುತ್ತೂರು, ಡಾ.ಜೋಸೆಫ್ ಲೋಬೊ ಶಂಕರಪುರ, ರಕ್ತದಾನಿ ಮಂಜು ಮೈಸೂರು, ನೀಮಾ ಲೋಬೊ, ಪದ್ಮನಾಭ ಆರ್ ಕೋಟ್ಯಾನ್, ದೇವಕಿ ಮಣಿಪಾಲ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರಿನ ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ.ಪ್ರದೀಪ್ ಕುಮಾರ್ ಪ್ರಸ್ತಾವನೆಗೈದರು. ಪುರುಷೋತ್ತಮ ಕೊಟ್ಟಾರಿ ಸ್ವಾಗತಿಸಿದರು. ಶೋಭಾ ದಿನೇಶ್ ಉದ್ಯಾವರ ಮತ್ತು ಸನ್ಮತಿ ಇಂದ್ರ ಕಾರ್ಯಕ್ರಮ ನಿರೂಪಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!