ಝಾರ್‌ಖಂಡನ ರಾಂಚಿಯಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI) ಇವರು ಆಯೋಜಿಸಿದ 69ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಟೂರ್ನಮೆಂಟ್ 2025-26ನೇ ವರ್ಷದ ಚದುರಂಗ ಆಟದಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿಯ ಕುಮಾರಿ ರಿಮಾ ರಾವ್ ಯು.ಬಿ. ಇವರು ತೃತೀಯ ಸ್ಥಾನ ಪಡೆದು ಕಂಚಿನ ಪದಕಕ್ಕೆ ಭಾಜನರಾಗಿ ಶಾಲೆಗೆ ಗರಿಮೆಯನ್ನು ತಂದಿರುತ್ತಾರೆ. ಇವರು ಶ್ರೀ ಯು.ಬಿ ಪ್ರಕಾಶ್ ರಾವ್ ಮತ್ತು ಶ್ರೀಮತಿ ಉಷಾ ರಾವ್ ಇವರ ಸುಪುತ್ರಿಯಾಗಿದ್ದು, ವಿ.ಬಿ ಚೆಸ್ ಕೋಚಿಂಗ್‌ನ ಚೆಸ್ ಕೋಚ್ ಶ್ರೀ ಶರತ್ ಕುಮಾರ್ ಇವರಲ್ಲಿ ಚೆಸ್ ತರಬೇತಿಯನ್ನು ಪಡೆಯುತ್ತಿದ್ದಾರೆ.
ಇವರ ಈ ವಿಶೇಷ ಸಾಧನೆಗೆ ಶಾಲಾ ಸಂಚಾಲಕರಾದ ಶ್ರೀ ಕೆ.ಅಣ್ಣಪ್ಪ ಶೆಣೈ, ಶಾಲಾ ಆಡಳಿತ ಮಂಡಳಿ ಸದಸ್ಸ ಶ್ರೀ ಕೆ ರತ್ನಾಕರ ಶೆಣೈ, ಮುಖ್ಯ ಅತಿಥಿ ಡಾ ಸೂರಜ್ ಹೆಗ್ಡೆ, ಪ್ರಾರ್ಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಶ್ಮಾ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಕೆ.ವಿನಾಯಕ್ ಕಿಣಿ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಶಶಿರಾಜ್ ಕುಂದರ್, ಕೋಶಾಧಿಕಾರಿ ವೈಷ್ಣವಿ ಕಾಮತ್ ಹಾಗೂ ಸದಸ್ಸರು, ಶಿಕ್ಷಕರು ಶಿಕ್ಷಕೇತರರು, ಪೋಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ ಹಾಗೂ ಇವರ ಭವಿಷ್ಯ ಉಜ್ವಲವಾಗಿ, ಇನ್ನು ಹೆಚ್ಚಿನ ಪ್ರಶಸ್ತಿಗಳನ್ನು ಗಳಿಸುವಂತಾಗಲಿ ಎಂದು ಶುಭ ಹಾರೈಸಿರುತ್ತಾರೆ.

0 ಕಾಮೆಂಟ್‌ಗಳು