ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿರುವ ಉಗ್ರಾಣದ ಸಮೀಪದಲ್ಲಿ ಬೃಹತ್ ವಸ್ತು ಪ್ರದರ್ಶನ - ಮಾರಾಟ ಮೇಳ - ಅಮ್ಯುಸ್ಮೆಂಟ್ ಪಾರ್ಕ್ ನ್ನು ಭಾವಿ ಪರ್ಯಾಯ ಪೀಠಾಧೀಶ ಶ್ರೀ ಶ್ರೀ ವೇದವರ್ಧನ ಶ್ರೀಪಾದರು ಜನವರಿ 15ರಂದು ಸಂಜೆ 4:00 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಮೇಳದಲ್ಲಿ ಕೈಮಗ್ಗದ ಸೀರೆಗಳು, ಖಾದಿ ಬಟ್ಟೆಗಳು, ಕೃಷಿ, ಅಹಾರ, ಐಸ್ಕ್ರೀಮ್, ಮಕ್ಕಳ ಆಟಿಕೆಗಳು, ಆಭರಣ, ನರ್ಸರಿ ಮುಂತಾದ ನೂರಾರು ವಿವಿಧ ಬಗೆಯ ಮಳಿಗೆಗಳಿವೆ.
ಅಮ್ಯುಸ್ಮೆಂಟ್ ಪಾರ್ಕ್ ನಲ್ಲಿ ವಿಶೇಷ ಮನೋರಂಜನೆ ಆಟಗಳನ್ನು ಅಳವಡಿಸಲಾಗಿದೆ. ಬ್ರಹ್ಮಕುಮಾರಿಯ ವಿಶ್ವವಿದ್ಯಾನಿಲಯದಿಂದ ವಿಶೇಷ ಚಿತ್ರ ಪ್ರದರ್ಶನ, ಮತ್ಸ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಈ ವಸ್ತು ಪ್ರದರ್ಶನ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ. ಊರ ಪರವೂರ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶೀರೂರು ಪರ್ಯಾಯದ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ.

0 ಕಾಮೆಂಟ್‌ಗಳು