ವಿದ್ಯೋದಯಪೆಕ್ಸ್-2026: ಅಂಚೆ ಚೀಟಿ ಮತ್ತು ನಾಣ್ಯ ಪ್ರದರ್ಶನ

ದಕ್ಷಿಣ ಕನ್ನಡ ಫಿಲಾಟಲಿಕ್ ಮತ್ತು ನ್ಯುಮಿಸ್ಮಾಟಿಕ್ ಅಸೋಸಿಯೇಷನ್ ಮಂಗಳೂರು (50ನೇ ವರ್ಷಾಚರಣೆ) ಮತ್ತು ಮಣಿಪಾಲ ಫಿಲಾಟಲಿ ಮತ್ತು ನ್ಯುಮಿಸ್ಮಾಟಿಕ್ ಕ್ಲಬ್ (ದಶ ವರುಷದ ಸಂಭ್ರಮಾಚರಣೆ) ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಸಹಯೋಗದೊಂದಿಗೆ ವಿದ್ಯೋದಯ ಪೆಕ್ಸ್ 2026 ಅಂಚೆ ಚೀಟಿ ಸಂಗ್ರಹಣೆ ಹಾಗೂ ನಾಣ್ಯ ಪ್ರದರ್ಶನವನ್ನು ಜನವರಿ 31ರಂದು ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಿದೆ.

ಬೆಳಗ್ಗೆ 9:30ಕ್ಕೆ ಶ್ರೀ ಕಾಣಿಯೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಈ ಪ್ರದರ್ಶನವನ್ನು ಉದ್ಘಾಟಿಸಲಿದ್ದು, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ ಅಧ್ಯಕ್ಷರಾಗಿರುವ ಸಿ ಎನ್ ನಾಗರಾಜ್ ಬಳ್ಳಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ ರಮೇಶ್ ಪ್ರಭು, ಶ್ರೀ ಕಿರಣ್ ಆಚಾರ್ಯ, ಶ್ರೀ ಮಾರ್ಕಡ್ ಪ್ರಭಾಕರ್ ಕಾಮತ್ ಹಾಗೂ ವಿದ್ಯೋದಯ ಪ್ರೌಢಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಪಿ ರಾಜ್ ಭಾಗವಹಿಸಲಿದ್ದಾರೆ.

ಮಕ್ಕಳಿಗೆ ಬೆಳಿಗ್ಗೆ 9:30 ರಿಂದ ಒಂದು ಗಂಟೆಯ ತನಕ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ 1:30ರಿಂದ ಸಂಜೆ 4 ಗಂಟೆ ತನಕ ವೀಕ್ಷಿಸಲು ಮುಕ್ತ ಅವಕಾಶವಿದೆ ಎಂದು ವಿದ್ಯೋದಯಪೆಕ್ಸ್-2026 ಸಂಯೋಜಕರು ಮತ್ತು ವಿದ್ಯೋದಯ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು