ಯುವ ವಿಚಾರ ವೇದಿಕೆ ಉಪ್ಪೂರು, ಕೊಳಲಗಿರಿ- ರಜತ ಸಂಭ್ರಮ, ಗ್ರಾಮೀಣ ಕ್ರೀಡಾಕೂಟ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ಹಾಗೂ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಲಾಯಿತು. ಬತ್ತದ ಕಳಸಕ್ಕೆ ಬತ್ತ ತುಂಬುವುದರ ಮೂಲಕ ಗ್ರಾಮೀಣ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಉಪ್ಪೂರು ವ್ಯ.ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಹೂವಯ್ಯ ಸೇರ್ವೇಗಾರ್ ರವರು ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳಾದ ಕುಟ್ಟಿ ದೊಣ್ಣೆ ಲಗೂರಿ ಮುಂತಾದ ಕ್ರೀಡೆಗಳನ್ನು ಮಕ್ಕಳಿಗೆ ಪರಿಚಯಿಸುವ ಹಾಗೂ ಸಾರ್ವನಜಕರಿಗೆ ನೆನಪಿಸುವ ಮಾದರಿ ಕಾರ್ಯಕ್ರಮ ಹಾಗೂ ಜಗವೆಲ್ಲ ಸಿಹಿ ನಿದ್ದೆಯಲ್ಲಿ ಮಲಗಿರುವ ಹೊತ್ತು ಜಗದ ಸುದ್ದಿಯನ್ನು ಮನೆ ಮನೆ ಮುಟ್ಟಿಸುವ ಪತ್ರಿಕಾ ವಿತರಕರನ್ನು ಗೌರವಿಸಿರುವುದು ಶ್ಲಾಘನೀಯ ಹಾಗೂ ಮಳೆ ಗಾಳಿನ್ನು ಲೆಕ್ಕಿಸದೆ ಜೀವ ಹಂಗು ತೊರೆದು ಕರ್ತವ್ಯ ನಿರ್ವಹಿಸುವ ಮೆಸ್ಕಾಂ ಪವರ್ ಮ್ಯಾನ್ಗಳನ್ನು ಗುರುತಿಸಿ ಗೌರವಿಸಿದ್ದು ಜಿಲ್ಲಾ ರಾಜ್ಯೋತ್ಸ್ವ ಪ್ರಶಸ್ತಿ ಪುರಸ್ಕೃತ ಯುವ ವಿಚಾರ ವೇದಿಕೆ ಕಾರ್ಯವು ಅಭಿನಂದನೀಯ ಎಂದರು. ವೇದಿಕೆಯಲ್ಲಿ ಗಣ್ಯರಾದ ಡಾ.ಸಂದೇಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರತ್ನಾಕರ ಮರಕಾಲ, ಉ, ವ್ಯ,ಸೇ,ಸಹಕಾರಿ ಸಂಘದ ನಿರ್ದೇಶಕರಾದ ರಮೇಶ್ ಕರ್ಕೇರಾ ವೇದಿಕೆಯ ಅಧ್ಯಕ್ಷರಾದ ಸಂದೀಪ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 48 ವರ್ಷಗಳಿಂದ ಸುದೀರ್ಘವಾಗಿ ದಿನ ಪತ್ರಿಕೆ ವಿತರಣೆ ಮಾಡುತ್ತಿರುವ ಪುಂಡಲೀಕ ಶಣೈ, ಪತ್ರಿಕಾ ವಿತರಕರಾದ ಅಶೋಕ್ ಚಾತ್ರ, ಮೆಸ್ಕಾಂ ಪವರ್ ಮ್ಯಾನ್ ಗಳಾದ ಶರಣಪ್ಪ ಹಳ್ಳಪ್ಪನವರ್, ಮಂಜುನಾಥ ಹಾದಿಮನಿ, ಹಾಗೂ ಅಡಿವೆಪ್ಪ ಪಾಟೀಲ ರವರನ್ನು ಗೌರವಿಸಿ ಸಮ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಗಳು ಹಾಗೂ ಸಾರ್ವಜನಿಕರು ಸೇರಿ 250 ಕ್ಕೂ ಹೆಚ್ಚಿನ ಸ್ಪರ್ಧಿಗಳು ವಿವಿಧ ಗ್ರಾಮೀಣ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು. ಸಂಘದ ಪದಾಧಿಕಾರಿಗಳು ಸರ್ವಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಘದ ಸದಸ್ಯರಾದ ಶೋಭಾ ಯೋಗೀಶ್, ಶಾಂತ ಸೆಲ್ವರಾಜ್ ಹಾಗೂ ಸುಕನ್ಯ ರವರು ಸಮ್ಮಾನಿತರ ಪರಿಚಯ ವಾಚಿಸಿದರು, ಶಕುಂತಲಾ ಸುಕೇಶ್ ಪ್ರಾರ್ಥನೆ ಯೊಂದಿಗೆ ಆರಂಭಗೊಂಡು, ಪ್ರಧಾನ ಕಾರ್ಯದರ್ಶಿ ಸದಾಶಿವ ರವರು ಸ್ವಾಗತಿಸಿ, ಸುರೇಶ್ ರವರು ವಂದನಾರ್ಪಣೆ ಗೈದರು ಯೋಗೀಶ್ ಕೊಳಲಗಿರಿ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು