ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಭಕ್ತಿ ಮತ್ತು ನಂಬಿಕೆ ಜೀವನಕ್ಕೆ ಸತ್ಪಥವನ್ನು ತೋರಿಸಬಲ್ಲುದು. ದೇವರ ಮೇಲಿನ ಭಕ್ತಿ ನಮ್ಮೊಳಗಿನ ಅಶಾಂತಿ, ಭಯಗಳನ್ನು ಶಮನಗೊಳಿಸಿ ಶಾಂತಿಯನ್ನು ನೀಡುತ್ತದೆ. ನಂಬಿಕೆ ನಮ್ಮನ್ನು ಸಂಕಷ್ಟಗಳಲ್ಲಿ ಧೈರ್ಯದಿಂದ ಮುಂದೆ ನಡೆಯಲು ಶಕ್ತಿ ನೀಡಿ ಪ್ರಗತಿ ಹೊಂದಲು ಕಾರಣವಾಗುತ್ತದೆ ಎಂದು ವಿ ಜಿ ಶೆಟ್ಟಿ ಅಭಿಪ್ರಾಯ ಪಟ್ಟರು.

 ಅವರು ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ವಾರ್ಷಿಕ ರಥೋತ್ಸವದ ಪ್ರಯುಕ್ತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡುತ್ತ ಬಾಲ್ಯದಲ್ಲಿ ನಮಗೆ ಹಿರಿಯರು ನೀಡಿದ ಒಳ್ಳೆಯ ಸಂಸ್ಕಾರವಷ್ಟೇ ನಮ್ಮ ಜೀವನಕ್ಕೆ ಭದ್ರವಾದ ಅಡಿಪಾಯ. ಮುಂದಿನ ಪೀಳಿಗೆಗೆ ನಾವು ಇದನ್ನೇ ಉಡುಗೊರೆಯಾಗಿ ನೀಡಬೇಕು ಎಂದರು.

ಶ್ರೀ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅಡಿಗ ಕೃಷ್ಣಮೂರ್ತಿ ಭಟ್, ಯು ನರೇಂದ್ರ ಕಲ್ಮಾಡಿ, ಸದಾನಂದ ಸೇರಿಗಾರ್ ಮತ್ತು ಪೂರ್ಣಿಮಾ ಜನಾರ್ದನ್ ರವರಿಗೆ ಶ್ರೀ ಶಂಕರನಾರಾಯಣಾನುಗ್ರಹ ಪ್ರಶಸ್ತಿ ನೀಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉದ್ಯಮಿ ಆನಂದ ಪಿ ಸುವರ್ಣ, ಕೆಎಂಎಫ್ ಅಧ್ಯಕ್ಷ ರವಿರಾಜ ಹೆಗ್ಡೆ, ಶಂಕರನಾರಾಯಣ ಭಕ್ತವೃಂದ ಅಧ್ಯಕ್ಷ ತೋಟದಮನೆ ದಿವಾಕರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಉಷಾ ಆನಂದ ಸುವರ್ಣ, ಎ ರಾಜ ಸೇರಿಗಾರ್, ವಾದಿರಾಜ್ ಸಾಲ್ಯಾನ್, ಯಶೋಧರ ಸಾಲ್ಯಾನ್, ಬಾಬಾ ಕೆ, ಉಪಸ್ಥಿತಿತರಿದ್ದರು.

ಶ್ರೀದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿ, ಪ್ರಸ್ತಾಪಿಸಿದರು. ಶಂಕರ ನಾರಾಯಣ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ್ ಕೊಡವೂರು ಧನ್ಯವಾದವಿತ್ತರು. ಕಾರ್ಯದರ್ಶಿ ಸತೀಶ್ ಕೊಡವೂರು ನಿರೂಪಿಸಿದರು.        

ಸಭಾಕಾರ್ಯಕ್ರಮದ ಬಳಿಕ ನೃತ್ಯನಿಕೇತನ ಕೊಡವೂರು ತಂಡದ ಸದಸ್ಯರಿಂದ ನೃತ್ಯಸಿಂಚನ ಕಾರ್ಯಕ್ರಮ ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು