ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಪ್ರಾಥಮಿಕ ಆರೋಗ್ಯ ಕೇ೦ದ್ರ, ಮೂಡುಬೆಟ್ಟು, ಆಯುಷ್ಮಾನ್ ಕೇ೦ದ್ರ ಪಿತ್ರೋಡಿ, ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ, ಉಡುಪಿ, ಒನ್ ಸೈಟ್ ಎಸ್ಸಿಲಾರ್ ಲಕ್ಸೋಟ್ಟಿಕಾ ಫೌ೦ಡೇಶನ್, ಬೆ೦ಗಳೂರು. ನೇತ್ರಜ್ಯೋತಿ ಫಿಸಿಯೋಥೆರಪಿ ಕಾಲೇಜ್,ಉಡುಪಿ ಇವರ ಜ೦ಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಹಾಗೂ ಉಚಿತ ಶಸ್ತç ಚಿಕಿತ್ಸಾ ಶಿಬಿರ ಪಿತ್ರೋಡಿ ಅ೦ಗನವಾಡಿ ಕೇ೦ದ್ರದಲ್ಲಿ ನಡೆಯಿತು.
ಶಿಬಿರವನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಸಮೂಹ ಕಣ್ಣಿನ ಆಸ್ಪತ್ರೆಗೆಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಯಾವರ ಗ್ರಾಮ ಪ೦ಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ ಸ೦ದೀಪ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉದ್ಯಾವರ ಗ್ರಾಮ ಪ೦ಚಾಯತ್ ಸದಸ್ಯರಾದ ಶ್ರೀ ದಯಾನ೦ದ ಕೋಟ್ಯಾನ್, ಮಾಜಿ ಸದಸ್ಯ ಕಿರಣ್ ಕುಮಾರ್, ನೇತ್ರಜ್ಯೋತಿ ಫಿಸಿಯೋಥೆರಪಿ ಕಾಲೇಜ್‌ನ ಡಾ. ಸಾವನಿ ಆಪ್ಟೆ ಭಾಗವಹಿಸಿದ್ದರು. ಪಿತ್ರೊಡಿ ಸಮುದಾಯ ಆರೋಗ್ಯ ಕೇ೦ದ್ರದ ಆರೋಗ್ಯಾಧಿಕಾರಿ ದೀಕ್ಷಾ ಹಾಗೂ ಪ್ರಾಥಮಿಕ ಆರೋಗ್ಯ ಕೇ೦ದ್ರ ಆರೋಗ್ಯ ಸ೦ರಕ್ಷಾಣಾಧಿಕಾರಿ ವಿದ್ಯಾ, ಆಶಾ ಕಾರ್ಯಕರ್ತೆಯರಾದ ದೀಪಾ, ರೊಸ್ಸಿನಾ, ಶಾಲಿನಿ ಶಿಬಿರದಲ್ಲಿ ಭಾಗವಹಿಸಿದ್ದರು.
ಶ್ರೀಮತಿ ವಿದ್ಯಾ ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ೯೪ ಮ೦ದಿ ಶಿಬಿರದಲ್ಲಿ ತಪಾಸಣೆಗೆ ಒಳಗಾದರು. ೧೨ ಮ೦ದಿಯನ್ನು ಉಚಿತ ಪೊರೆಗಾಗಿ ಮತ್ತು ೫೨ ಮ೦ದಿ ಉಚಿತ ಕನ್ನಡಕ ವಿತರಣೆಗೆ ಆಯ್ಕೆಗೊ೦ಡರು.

0 ಕಾಮೆಂಟ್‌ಗಳು