ಪುತ್ತಿಗೆ ಶ್ರೀಗಳನ್ನು ಭೇಟಿಯಾದ ಐಯ್ಯರ್

ಉಡುಪಿ: ಬ್ರಿಟಿಷ್ ಡೆಪ್ಯೂಟಿ ಹೈಕಮಿಷನ‌ರ್ (ಕರ್ನಾಟಕ- ಕೇರಳ) ಚಂದ್ರು ಐಯ್ಯರ್ ಅವರು ಶನಿವಾರ ಗೀತಾ ಮಂದಿರದಲ್ಲಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಶ್ರೀಗಳು ತಮ್ಮ ಚತುರ್ಥ ಪರ್ಯಾಯವನ್ನು ಕೋಟಿ ಗೀತಾ ಲೇಖನ ಯಜ್ಞ ಸಹಿತ ವಿವಿಧ ಆಯಾಮಗಳ ಮೂಲಕ ಶ್ರೀಮದ್ಭಗವದ್ಗೀತೆಯನ್ನು ಪ್ರಚುರಪಡಿಸಿ ವಿಶ್ವ ಗೀತಾ ಪರ್ಯಾಯ ಹೆಸರನ್ನು ಅನ್ವರ್ಥಗೊಳಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು.

ಜಗತ್ತಿನ ಎಲ್ಲ ಕ್ಲೇಶಗಳ ನಿವಾರಣೆಗೆ ಗೀತೆಯೇ ಪರಮೌಷಧ ಎಂಬುದಾಗಿ ಪುತ್ತಿಗೆ ಶ್ರೀಗಳು ಒತ್ತಿಹೇಳಿ, ಬಹುಜನರ ಅಕಾಂಕ್ಷೆಯಂತೆ ಕೋಟಿ ಗೀತಾ ಲೇಖನ ಯಜ್ಞವನ್ನು ಮುಂದಿನ ಎರಡು ವರ್ಷ ಪರ್ಯಂತ ವಿಸ್ತರಿಸಿರುವುದಾಗಿ ತಿಳಿಸಿ, ಐಯ್ಯರ್ ಅವರಿಗೆ ಗೀತಾ ಲೇಖನ ದೀಕ್ಷೆ ನೀಡಿ ಹರಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು