೪೬ನೇ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-೨೦೨೬ ಜನವರಿ ೨೮ ರಿಂದ ಫೆಬ್ರವರಿ ೧ರ ತನಕ ಚಂದ್ರಶೇಖರನ್ ನಾಯರ್ ಕ್ರೀಡಾಂಗಣ, ತಿರುವನಂತಪುರಮ್, ಕೇರಳದಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ೭೦ + ವಿಭಾಗದಲ್ಲಿ ೫೦೦೦ ಮೀಟರ್ ಓಟ, ೧೫೦೦ ಮೀ. ಓಟ, ೮೦೦ ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿ, ೩ ಬೆಳ್ಳಿ ಪದಕ ಹಾಗೂ ೪*೧೦೦ ರಿಲೇಯಲ್ಲಿ ಪ್ರಥಮ ಸ್ಥಾನ ೧ ಚಿನ್ನದ ಪದಕ, ೪*೪೦೦ ರಿಲೇಯಲ್ಲಿ ದ್ವಿತೀಯ ಸ್ಥಾನ ೧ ಬೆಳ್ಳಿಯ ಪದಕ ಹೀಗೆ ಒಟ್ಟು ೪ ಬೆಳ್ಳಿ ಪದಕ ಹಾಗೂ ೧ ಚಿನ್ನದ ಪದಕ ಗಳಿಸಿ, ಅಂತಾರಾಷ್ಟ್ರೀಯ ಮಟ್ಟ (ಹಿರಿಯರ ಓಲಂಪಿಕ್ಸ್)ನಲ್ಲಿ ಭಾರತವನ್ನು ಪ್ರತಿನಿಧಿಸಿ, ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ಇವರು ಹಿರಿಯಡಕದ ಬೊಮ್ಮಾರಬೆಟ್ಟು ಗುಡ್ಡೆಅಂಗಡಿ ನಿವಾಸಿಯಾಗಿರುತ್ತಾರೆ ಹಾಗೂ ಉಪ್ಪೂರಿನ ಜಾತಾಬೆಟ್ಟಿನ ನಿವಾಸಿಯೂ ಆಗಿರುತ್ತಾರೆ.

0 ಕಾಮೆಂಟ್‌ಗಳು