ಓಮನ್‌ನಲ್ಲಿ ಸರಣಿ ಅಪಘಾತ : ಕಾಪುವಿನ ಯುವಕ ಮೃತ್ಯು!

ಓಮನ್‌ನ ಉತ್ತರ ಅಲ್ ಬಟಿನಾ ಗವರ್ನರೇಟ್‌ನ ಲಿವಾ ವಿಲಾಯತ್‌ನಲ್ಲಿ ಫೆ.8ರಂದು ಮುಂಜಾನೆ ಸಂಭವಿಸಿದ ಸರಣಿ ಅಪಘಾತದಲ್ಲಿ ಉಡುಪಿ ಕಾಪು ಸಮೀಪದ ಉಚ್ಚಿಲ ಕಲತ್ತೂರು ನಿವಾಸಿ ಚೇತನ್ (26) ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ಧೃಡಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು