ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ; ಬ್ರಹ್ಮಕಲಶೋತ್ಸವ ಸೇವಾ ಕಛೇರಿ ಉದ್ಘಾಟನೆ

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ 16 ರಿಂದ 20 ವರೆಗೆ ನೆಡೆಯಲ್ಲಿರುವ ಬ್ರಹ್ಮಕಲಶೋತ್ಸವ ಸೇವಾ ಕಛೇರಿಯನ್ನು ಆದಿತ್ಯವಾರ ಜಿ ಶಂಕರ ಫ್ಯಾಮಿಲಿ ಟ್ರಸ್ಟ್ ಪವರ್ತಕ ಡಾ ಜಿ ಶಂಕರ್ ರವರು ಸೇವಾ ಕಛೇರಿ ಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಿವರಾತ್ರಿಯ ಪರ್ವ ಕಾಲದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ, ಧಾರ್ಮಿಕ ಪೂಜಾ ವಿಧಾನಗಳನ್ನು ದೇವಳದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ನೆಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಬನ್ನಂಜೆ, ಶಾಸಕ ಯಶಪಾಲ್ ಸುವರ್ಣ, ರಮೇಶ್ ಕಾಂಚನ್, ತೋಟದ ಮನೆ ದಿವಾಕರ್ ಶೆಟ್ಟಿ, ಪುರೋಷೋತ್ತಮ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್ ದೇವಳದ ಅರ್ಚಕರಾದ ವಾಸುದೇವ ಉಪದ್ಯಾಯ, ನಗರ ಸಭಾ ಮಾಜಿ ಸದಸ್ಯರಾದ ಸದಸ್ಯರಾದ ಟಿ ಜಿ ಹೆಗ್ದೆ, ಸವಿತಾ ಹರೀಶ್ ರಾಂ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ, ದಿನೇಶ್ ಪುತ್ರನ್, ಶೇಖರ್ ಶೆಟ್ಟಿ, ಸುದೇಶ್ ಶೇಟ್ , ರಾಜೇಶ್ ಬನ್ನಂಜೆ, ಶಮಿತಾ ಎಸ್ ಭಂಡಾರಿ, ವಿದ್ಯಾಲತಾ ಶೆಟ್ಟಿ, ಲಕ್ಷ್ಮಣ್, ಸದಾನಂದ, ಗಣನಾಥ ಹೆಗ್ಡೆ, ಮೀನಾಕ್ಷಿ ಬನ್ನಂಜೆ, ಮಾಜಿ ಅಧ್ಯಕ್ಷರಾದ ಹರೀಶ್ ರಾಮ್ ಹಾಗೂ ಮೆನೇಜರ್ ರವಿರಾಜ್ ಭಟ್, ಅರುಣ್ ಕುಮಾರ್, ವಿವಿಧ ಭಜನಾ ಮಂಡಳಿಯ ಸದಸ್ಯರು ನೂರಾರು ಭಕ್ತರೂ ಉಪಸ್ಥರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು