ಪ್ರತೀ ದೇವಸ್ಥಾನದಲ್ಲಿ ಒಳ್ಳೆಯ ಲಕ್ಷಣವಾದ ಮರವನ್ನು ಸಾಧಾರಣವಾಗಿ ತೇಗ ಮರವನ್ನು ಕೊಡಿಮರವನ್ನಾಗಿ ಸ್ಥಾಪಿಸುತ್ತಾರೆ. ಆ ಮರಕ್ಕೆ ತಾಮ್ರ ಇಲ್ಲವೇ ರಜತ ಅಥವಾ ಸ್ವರ್ಣ ಲೇಪನದ ಕವಚದ ಹೊದಿಕೆಯೊಂದಿಗೆ ತಳ ಭಾಗದಲ್ಲಿ ವಿಶಿಷ್ಟ ವಿನ್ಯಾಸದ ಶಿಲೆಯ ಆವರಣವಿದ್ದು ಪುಟ್ಟ ಪುಟ್ಟ ಮೂರ್ತಿಗಳು ಶೋಭಿಸುತ್ತಿರುತ್ತವೆ
.ಆಕಾಶದಲ್ಲಿರುವ ದೇವತೆಗಳಿಗೆ ಇಳಿದು ಬರಲು ಎತ್ತರದ ಸ್ಥಳಗಳು ಬೇಕಿದ್ದು ಶ್ರೀ ದೇವಳದ ಕೊಡಿ ಮರದಲ್ಲಿ ಧ್ವಜಾರೋಹಣವನ್ನು ಕಂಡು ಉತ್ಸವದ ಆರಂಭದ ಒಸಗೆ ಎಂಬಂತೆ ದೇವತೆಗಳು ಕೊಡಿ ಮರದ ಮುಖಾಂತರ ಇಳಿದು ಬರುತ್ತಾರೆ ಎಂಬ ನಂಬಿಕೆ ಹಿರಿಯರದ್ದು.
ಆ ಗ್ರಾಮದ ಬೇರೆಲ್ಲಾ ಕಟ್ಟಡಗಳಿಗಿಂತ ಕೊಡಿಮರದ ತುದಿ ಎತ್ತರ ಸ್ಥಾನದಲ್ಲಿರುತ್ತದೆ. ಅತ್ಯಂತ ಎತ್ತರದ ಪ್ರದೇಶಗಳು( ವಿಶೇಷವಾಗಿ ಪರ್ವತ ಪ್ರದೇಶಗಳು) ದೇವತೆಗಳಿಗೆ ಪ್ರಿಯವಾಗಿದ್ದು ಅಲ್ಲಿ ಅವರು ನೆಲೆ ನಿಲ್ಲುತ್ತಾರೆ ಎಂಬ ಪ್ರತೀತಿ ಇದೆ.
ಶ್ರೀ ದೇವಳದ ಕೊಡಿಮರವನ್ನು ಕದಳಿ ಗಿಡ, ಸಿಂಗಾರ ಹೂ, ಹಲಸು,ಮಾವು, ಕಲ್ಪವೃಕ್ಷ, ದರ್ಬೆ,ಫಲ,ಪುಷ್ಪ ಪರ್ಣಗಳಿಂದ ಅಲಂಕರಿಸಿ ವಿಧಿವತ್ತಾದ ಪೂಜೆ ಪುನಸ್ಕಾರಗಳಿಂದ ಆರಾಧಿಸಿ ಒಂದು ಬದಿ ಗರುಡ, ಇನ್ನೊಂದು ಬದಿ ನಂದಿಯ ಉಬ್ಬು ಕಲಾಕೃತಿ ಇರುವ ರಜತ ಧ್ವಜದ ಧ್ವಜಾರೋಹಣವನ್ನು ಪ್ರಧಾನ ತಂತ್ರಿ ಪುತ್ತೂರು ಹಯವದನ ತಂತ್ರಿಗಳು ನೆರವೇರಿಸಿ ವಾರ್ಷಿಕ ರಥೋತ್ಸವಕ್ಕೆ ನಾಂದಿ ಹಾಡುತ್ತಾರೆ.
-ಪೂರ್ಣಿಮಾ ಜನಾರ್ದನ್
ಈ ಸಂದರ್ಭದಲ್ಲಿ
ಪ್ರಕಾಶ್ ಜಿ ಕೊಡವೂರ್
ಸೀತಾರಾಮ ಆಚಾರ್ಯ
ಜನಾರ್ದನ್ ಕೊಡವೂರ್
ರವಿರಾಜ್ ಹೆಗ್ಡೆ
ತೋಟದಮನೆ ದಿವಾಕರ ಶೆಟ್ಟಿ
ಶಿವಪ್ಪ ಟಿ ಕಾಂಚನ್
ಸಾಧು ಸಾಲ್ಯಾನ್
ಉಮೇಶ್ ರಾವ್
ವಾಸುದೇವ ಉಪಾಧ್ಯ
ಲಕ್ಷ್ಮೀನಾರಾಯಣ ಭಟ್
ಗೋವಿಂದ ಐತಾಳ್
ಪೂರ್ಣಿಮಾ ಜನಾರ್ದನ್
ಉಷಾ ಆನಂದ ಸುವರ್ಣ
ಶೀಲಾ ಸೇರಿಗಾರ್
ಶಾಮ ಸುಂದರ್ ಭಟ್
ವಾದಿರಾಜ ಸಾಲ್ಯಾನ್
ರಾಜ ಸೇರಿಗಾರ್
ಬಾಬ ಕೆ
ಭಾಸ್ಕರ್ ಪಾಲನ್ ಮತ್ತು ಊರ ಭಕ್ತಾಧಿಗಳು ಉಪಸ್ಥಿತರಿದ್ದರು.

0 ಕಾಮೆಂಟ್‌ಗಳು