ಯಕ್ಷಗಾನ ಕಲಾರಂಗದ 89ನೆಯ ಮನೆ ಹಸ್ತಾಂತರ

 

ಕಳೆದ ಏಳು ವರ್ಷಗಳಿಂದ ಶ್ರೀವಾಣಿ ಪ್ರೌಢಶಾಲೆ, ನಡೂರು ಇಲ್ಲಿ ಕನ್ನಡ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸುರೇಂದ್ರ ನಾಯ್ಕ್ (ಎಂ.ಎ, ಬಿಎಡ್) ಇವರಿಗೆ ಕುಂದಾಪುರ ತಾಲೂಕಿನ ಕೊಡ್ಲಾಡಿಯಲ್ಲಿ ನಿರ್ಮಿಸಿದ ನೂತನ ಮನೆ ‘ಶ್ರೀ ಬ್ರಹ್ಮಲಿಂಗೇಶ್ವರ’ವನ್ನು ೨೩.೦೨.೨೦೨೬ ರಂದು ಪ್ರಾಯೋಜಕರಾದ ಬೆಂಗಳೂರಿನ ಎಸ್. ವೆಂಕಟೇಶ್-ನAದಾ ವೆಂಕಟೇಶ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೆಂಕಟೇಶ್‌ರವರು, ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸಗಳು ಅನ್ಯರ ಊಹೆಗೂ ನಿಲುಕದು. ಇಂತಹ ಕಾರ್ಯಗಳನ್ನು ಮಾಡುತ್ತಾ ಅದರಲ್ಲಿ ಎಷ್ಟು ಪರಿಣತರಾಗಿದ್ದಾರೆಂದರೆ ನಿರಂತರ ಹಲವು ಚಟುವಟಿಕೆಗಳೊಂದಿಗೆ ತಿಂಗಳಿಗೆರಡು ಮನೆ ಉದ್ಘಾಟಿಸುವುದು ಅವರಿಗೊಂದು ಸಂಗತಿಯೇ ಅಲ್ಲ. ಈ ಸಂಸ್ಥೆಯ ಕೆಲಸಗಳಿಗೆ ಕೈಜೋಡಿಸುತ್ತಾ ಅತ್ಯಂತ ಸಂತಸ ಅನುಭವಿಸುತ್ತಿದ್ದೇವೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆಯವರು ಯಕ್ಷಗಾನ ಕಲಾರಂಗದ ಕೆಲಸ ಅನುಕರಿಸಲಾಗದು. ಪ್ರಪಂಚದಲ್ಲಿ ಇಂತಹ ಇನ್ನೊಂದು ಸಂಘಟನೆ ಇಲ್ಲ ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಸಮರ್ಥ ನಾಯಕತ್ವ ಅರ್ಪಣಾ ಮನೋಭಾವದ ಕಾರ್ಯಕರ್ತರ ಪಡೆ ಅಭಿನಂದನಾರ್ಹರು ನನ್ನೊಂದಿಗೆ ಕೆಲಸ ಮಾಡುವ ಕಾರ್ಯಕರ್ತರಿಗೆ ಕಲಾರಂಗದ ಕಾರ್ಯ ವೈಖರಿಯನ್ನು ಉಲ್ಲೇಖಿಸುತ್ತಾ ಇರುತ್ತೇನೆ ಎಂದು ಹೇಳಿದರು. ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ (ರಿ.) ನಡೂರಿನ ಗೌರವ ಮಾರ್ಗದರ್ಶಕರಾದ ಪ್ರೊ. ಸಖಾರಾಮ ಸೋಮಯಾಜಿಯವರು ಮನೆ ಆರಂಭಿಸಿ ಕೈಸಾಗದೆ ಕಂಗಾಲಾಗಿ ಕುಳಿತ ಹೊತ್ತಿಗೆ ಸುರೇಂದ್ರ ನಾಯ್ಕರಿಗೆ ಕಲಾರಂಗವನ್ನು ತೋರಿಸಿದೆ. ಕಷ್ಟಕ್ಕೆ ಸ್ಪಂದಿಸುವ ಸಂಸ್ಥೆಯಿAದ ನಿರ್ಮಾಣಗೊಂಡ ಮನೆ, ನೊಂದ ಶಿಕ್ಷಕರಿಗೊದಗಿದ ಮಹಾ ಭಾಗ್ಯ ಎಂದು ಅಭಿಪ್ರಾಯ ಪಟ್ಟರು. ಸುರೇಂದ್ರ ನಾಯ್ಕರು ಮಾತನಾಡಿ ಸಾಲಮಾಡಿ ಆಡಂಬರದ ಮನೆ ಕಟ್ಟಿ ಸಾಲತೀರಿಸಲಾಗದೆ ನಿತ್ಯ ಬೇಯುವದಕ್ಕಿಂತ ನಮ್ಮ ಮಿತಿಯಲ್ಲಿ ಮನೆ ನಿರ್ಮಿಸಿ ಸುಖವಾಗಿರ ಬೇಕೆಂಬುದು ಕಲಾರಂಗ ನನಗೆ ಕಲಿಸಿದ ದೊಡ್ಡ ಪಾಠ. ದಾನಿಗಳಾದ ವೆಂಕಟೇಶ ದಂಪತಿಗಳಿಗೆ ನಮ್ಮ ಕುಟುಂಬ ಸದಾ ಋಣಿ, ಅವರೇ ನಮಗೆ ಪ್ರಾತಃ ಸ್ಮರಣೀಯರು ಎಂದರು. ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘ (ರಿ.) ನಡೂರಿನ ಆಡಳಿತಾಧಿಕಾರಿ ಎಂ. ವಿಶ್ವನಾಥ ಶೆಟ್ಟಿ, ಹೆಪ್ಪಿ ವರ್ಲ್ಡ್ನ ಪ್ರವರ್ಥಕರಾದ ಸಂತೋಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಪ್ರೊ. ಕೆ. ಸದಾಶಿವ. ರಾವ್, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಪ್ರಭಾಕರ ಬಂಡಿ, ಜಯರಾಮ ಪಡಿಯಾರ್, ವಿನೋದಾ. ಎಂ, ಯಕ್ಷಗಾನ ಕಲಾವಿದ ಉಮೇಶ್ ನಾಯ್ಕ್, ಸಾಮಾಜಿಕ ಕಾರ್ಯಕರ್ತರಾದ ಪ್ರವೀಣ್ ಶೆಟ್ಟಿ, ವಿದ್ಯಾಧರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು