ಯುವಕ ಮಂಡಲ (ರಿ.) ಪೆರಂಪಳ್ಳಿಯ ಸುವರ್ಣಮಹೋತ್ಸವ ಸಮಿತಿಯ ಉದ್ಘಾಟನೆ, ಲಾಂಛನ ಬಿಡುಗಡೆ ಮತ್ತು ಧ್ವಜಾರೋಹಣ ಕಾರ್ಯಕ್ರಮ ದಿನಾಂಕ:22-03-2026 ರಂದು ಯುವಕ ಮಂಡಲದ ದಿ. ಶ್ರೀ ಮಂಜುನಾಥ ಶಿವತ್ತಾಯ ರಂಗಮಂಟಪದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಶಶಾಂಕ್ ಶಿವತ್ತಾಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯು ಮುಖ್ಯ ಅತಿಥಿಗಳು ದೀಪ ಬೆಳಗುವ ಮೂಲಕ ನಡೆಯಿತು. ತದನಂತರ ಸಮಿತಿಯ ನೂತನ ಧ್ವಜಾರೋಹಣವನ್ನು ಯಕ್ಷಗುರು ಬನ್ನಂಜೆ ಶ್ರೀ ಸಂಜೀವ ಸುವರ್ಣ ಇವರು ನೆರವೇರಿಸಿದರು. ಸಮಿತಿಯ ಲಾಂಛನವನ್ನು ಶ್ರೀ ಪ್ರಶಾಂತ್ ಶೆಟ್ಟಿ ಮುಖ್ಯ ಪಶುವೈದ್ಯಾಧಿಕಾರಿಗಳು ಮಣಿಪಾಲ ಇವರು ಬಿಡುಗಡೆಗೊಳಿಸಿದರು.
ನಂತರ ಜಿಲ್ಲಾ ಪಂಚಾಯತ್ ಉಡುಪಿ, ಪಶುಚಿಕಿತ್ಸಾಲಯ ಮಣಿಪಾಲ, ಯುವಕ ಮಂಡಲ (ರಿ.) ಪೆರಂಪಳ್ಳಿ, ಉಡುಪಿ ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ, ನವಚೈತನ್ಯ ಯುವಕ ಮಂಡಲ (ರಿ.) ಪೆರಂಪಳ್ಳಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ (ರಿ.) ಪೆರಂಪಳ್ಳಿ ಇವರ ಜಂಟಿ ಆಶ್ರಯದಲ್ಲಿ ಸಾಕುನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ಕಾರ್ಯಕ್ರಮವು ನಡೆಯಿತು. ಪೆರಂಪಳ್ಳಿಯ 3 ಸ್ಥಳಗಳಲ್ಲಿ ಸುಮಾರು 150 ಕ್ಕೂ ಮಿಕ್ಕಿ ಸಾಕು ನಾಯಿಗಳಿಗೆ ಲಸಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಸೂರ್ಯೋದಯ ಪೆರಂಪಳ್ಳಿ, ಮುಖ್ಯ ಅತಿಥಿಗಳಾಗಿ ಯಕ್ಷಗುರು ಬನ್ನಂಜೆ ಶ್ರೀ ಸಂಜೀವ ಸುವರ್ಣ, ಡಾ. ಪ್ರಶಾಂತ್ ಶೆಟ್ಟಿ, ಶ್ರೀ ರವೀಂದ್ರ ಪೂಜಾರಿ, ಶ್ರೀ ವಿಶಾಲ್, ಶ್ರೀ ಗಣೇಶ್ ಪೂಜಾರಿ,
ಯುವಕ ಮಂಡಲದ ಗೌರವಾಧ್ಯಕ್ಷರುಗಳಾದ ಶ್ರೀ ಹರಿಕೃಷ್ಣ ಶಿವತ್ತಾಯ, ಶ್ರೀ ಗಂಗಾಧರ ಆಚಾರ್ಯ ಹಾಗೂ ಶ್ರೀ ಸುಧಾಕರ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀ ರಕ್ಷಿತ್ ಕೋಟ್ಯಾನ್ ಮತ್ತು ಸದಸ್ಯರಾದ ವಿಜಯ್ ಕುಮಾರ್, ಕುಟ್ಚಿ ಪಾಲನ್, ಲಕ್ಷ್ಮಣ್, ಜಗದೀಶ್ ಆಚಾರ್ಯ, ಪ್ರವೀಣ್ , ಜಯರಾಮ್, ಗೋಪಾಲ್, ಉದಯ ಬಂಗೇರ , ಸಂತೋಷ್ ಅಮೀನ್, ವರುಣ್, ಅಮಿತ್, ಅಕ್ಷಯ್, ಸುಪ್ರೀತ್, ಡೆನ್ನೀಸ್, ಗಣೇಶ್ ಅಮೀನ್, ನಂದನ್, ರಾಧೇಶ್, ಅನೀಶ್, ಭುವನ್, ಜ್ಞಾನೇಶ್, ಧನುಷ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ರಾಘವೇಂದ್ರ ಭಟ್ ನಿರೂಪಿಸಿದರು.

0 ಕಾಮೆಂಟ್‌ಗಳು