ಬ್ರಹ್ಮಾವರ : ಪರಾರಿ ಬೊಬ್ಬರ್ಯ ದೈವಸ್ಥಾನ ಪುನರ್ ಪ್ರತಿಷ್ಠೆ ಅಂಗವಾಗಿ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಪೂರ್ವಕವಾಗಿ ನಡೆದವು.ಸಂಜೆ ಬಿಂಬ ಸಂಕೋಚ, ಸಪ್ತಾದಿವಾಸ ಪೂಜೆ, ಪ್ರತಿಷ್ಟಾದಿವಾಸ ಹೋಮ, ಶಿಖರಾದಿವಾಸ, ಶಯ್ಯಾಕಲ್ಪ ಧಾರ್ಮಿಕ ವಿಧಿ ವಿಧಾನಗಳು ನಾರಾಯಣ ತಂತ್ರಿ ಕೊರಂಗರಪಾಡಿ ಇವರ ಪೌರಾಹಿತ್ಯದಲ್ಲಿ ನಡೆಯಿತು .
ಈ ಸಂದರ್ಭದಲ್ಲಿ ಪರಾರಿ ಬೊಬ್ಬರ್ಯ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುರುರಾಜ್ ಭಟ್ ಕೊಳಲಗಿರಿ, ಗೌರವಾಧ್ಯಕ್ಷ ಕೀಳಿಂಜೆ ಸತೀಷ್ ಪೂಜಾರಿ, ಪ್ರಧಾನ ಅರ್ಚಕ ಲಕ್ಷ್ಮೀಶ ಭಟ್ ಪರಾರಿ, ಪದಾಧಿಕಾರಿಗಳು, ಭಕ್ತಾದಿಗಳು ಸೇರಿದ್ದರು.

0 ಕಾಮೆಂಟ್‌ಗಳು