ಉದ್ಯಮಿ ಸುದೀಪ್ ಆತ್ಮಹತ್ಯೆ ಪ್ರಕರಣ; ಪತ್ನಿ ಸೌಮ್ಯ ಶೆಟ್ಟಿ ಬಂಧನ!

ಪಿರ್ಯಾದು ಬಿ.ದಾಮೋದರ (62) ತಂದೆ; ಬಿ. ನಾರಾಯಣ ರೈ ವಾಸ; ಬೀದಿ ಶಾಲೆ ಮನೆ, ಪಡುಬೆಟ್ಟು ಅಂಚೆ , ನೆಲ್ಯಾಡಿ ಗ್ರಾಮ, ಕಡಬ ತಾಲೂಕು ಇವರ ಮಗ ಸುದೀಪ್ನು ಆರೋಪಿತೆ ಕುಕ್ಕುಂದೂರು ಹಿಮ್ಮುಂಜೆ ಕಜೆ ವಾಸಿ ಸೌಮ್ಯ ಶೆಟ್ಟಿ ಇವಳನ್ನು ದಿನಾಂಕ 17.02.2026 ರಂದು ಪುತ್ತೂರು ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಮದುವೆಯಾಗಿದ್ದು, ಆ ಬಳಿಕ ಸುದೀಪ್‌ ಮತ್ತು ಸೌಮ್ಯಳು ಕಾರ್ಕಳ ತಾಲೂಕು ಜೋಡುರಸ್ತೆಯ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ವಾಸವಾಗಿರುತ್ತಾರೆ. ದಿನಾಂಕ 17.03.2026 ರಂದು ಸುದೀಪ್‌ ಕಾರು ನಂಬ್ರ KA 18 P 3076 ನೇಯದರಲ್ಲಿ ಆತನ ತಾಯಿಯೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಮನೆಯಿಂದ ಹೊರಟು, ದ.ಕ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯ ಸಮೀಪ ತಲುಪಿದಾಗ, ಆಕೆಯ ಸ್ಕೂಟಿಯನ್ನು ಚಲಾಯಿಸಿ ಕೊಂಡು ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾಳೆ, ಆಗ ಸುದೀಪನು ಕಾರ್ಕಳಕ್ಕೆ ಬಂದಿದ್ದು, ಕಾರ್ಕಳದಲ್ಲಿರುವಾಗ ದಿನಾಂಕ 22.03.2026 ರಂದು ಸೌಮ್ಯ ಶೆಟ್ಟಿ ಇವಳ ಸಂಬಂಧಿಕರಿಗೆ ಪೋನ್‌ ಮಾಡಿ, ಸುದೀಪನು ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ತಿಳಿಸಿದ್ದು, ನಂತರ ಕಾರ್ಕಳಕ್ಕೆ ಬಂದು ದಿನಾಂಕ 23.03.2026 ರಂದು ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ನಂತರ ಅಲ್ಲಿಂದ ದಿನಾಂಕ 24.03.2026 ರಂದು ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29.03.2026 ರಂದು ಬೆಳಿಗ್ಗಿನ ಜಾವ ಸುಮಾರು 03.09 ಗಂಟೆಗೆ ಮೃತಪಟ್ಟಿರುತ್ತಾನೆ. ಸುದೀಪನಿಗೆ ಸೌಮ್ಯಳು ಮಾನಸಿಕ ಚಿತ್ರಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿರುವುದಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ದಿನಾಂಕ 01.04.2026 ರಂದು ಉಡುಪಿ ಜಿಲ್ಲಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ಪ್ರಕರಣದ ತನಿಖೆಯನ್ನು ಕಾರ್ಕಳ ನಗರ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ಇವರಿಗೆ ವಹಿಸಿದ್ದು ಅವರು ಈ ಪ್ರಕರಣದಲ್ಲಿ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಪ್ರಾಥಮಿಕ ತನಿಖೆ ನಡೆಯಿಸಿ ಸಾಕ್ಷ್ಯ ಪುರಾವೆಗಳಿಂದ ಆರೋಪಿತೆ ಸೌಮ್ಯ ಶೆಟ್ಟಿ ಇವಳನ್ನು ದಿನಾಂಕ 11/04/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು