ದಿನಾಂಕ 26.04.2026 ರಂದು 02-00 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಭರ್ಭರೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳಗೆ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿತ್ತಾಯ, ನಾಗದೇವರ ಕಾಣಿಕೆ ಹುಂಡಿಯ ಬೀಗವನ್ನು ಓರ್ವ ವ್ಯಕ್ತಿಯು ಯಾವುದೋ ಆಯುಧದಿಂದ ಮುರಿದು ಹುಂಡಿಯಲ್ಲಿದ್ದ ಸುಮಾರು 1,000/- ರೂಪಾಯಿ ಕಾಣಿಕೆ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ದೇವಸ್ಥಾನದಲ್ಲಿ ಕಾವಲಿಗೆ ಉಳಿದುಕೊಳ್ಳುವ ಉಮೇಶ ಹೆಗ್ಡೆ, ಜನಾರ್ಧನ ಆಚಾರ್ಯ ಇವರು ಶಬ್ದ ಕೇಳಿ ಬರುವುದನ್ನು ನೋಡಿ, ವ್ಯಕ್ತಿ ಅಲ್ಲಿಂದ ಓಡಿ ಹೋಗಿ ಹೊರಗೆ ಇದ್ದ ಬೈಕ್‌ನಲ್ಲಿ ಪರಾರಿಯಾಗಿರುತ್ತಾನೆ ಎಂಬ ದೂರಿನಂತೆ ಅಜೆಕಾರು ಪೊಲೀಸ್ ಠಾಣೆ ಅ.ಕ್ರ:12/2026 ಕಲಂ: 305 BNS -2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಕಾರ್ಕಳ ಉಪವಿಭಾಗದ ಡಿ.ವೈ,ಎಸ್.ಪಿ ವಿಜಯ ಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್,. ಮಹೇಶ್ ಟಿ ಎಮ್ ಪಿಎಸ್‌ಐ ಕಾ & ಸು ರವರ ನೇತೃತ್ವದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಸಿಬ್ಬಂದಿಯವರ ಸಹಕಾರದಿಂದ ಆರೋಪಿ ರಾಘವೇಂದ್ರ ವಿ.ಕೆ(35) ತಂದೆ: ಕೃಷ್ಣ ಆಚಾರಿ ವಾಸ: 1-136 ಮಂಜಕ್ಯಾರು ವರಂಗ ಗ್ರಾಮ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಯನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿತನಿಂದ ಕಳುವಾದ 1000/- ನಗದು ಹಣ ಮತ್ತು KA20K5288 SPELNDER ಮೋಟಾರ್ ಸೈಕಲ್ನ್ನು (ಅಂದಾಜು ಮೌಲ್ಯ 25,000/-) , ಮೊಬೈಲ್ -1 (ಅಂದಾಜು ಮೌಲ್ಯ 5,000/-) ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ಸ್ಪ್ಯಾನರ್ ನ್ನು ವಶಪಡಿಸಿ ಕೊಳ್ಳಲಾಗಿದೆ.

0 ಕಾಮೆಂಟ್‌ಗಳು