ಮರು ಮೌಲ್ಯಮಾಪನ: ಅಮೋಘ್ ಎಸ್. ರಾವ್ ಹೆಚ್ಚುವರಿ ಅಂಕಗಳ ಸಾಧನೆ

ಆದಿವುಡುಪಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಅಮೋಘ್ ಎಸ್. ರಾವ್ ಕಂಬಳಕಟ್ಟ ಇವರು ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದ ನಂತರ 4 ಅಂಕಗಳ ಹೆಚ್ಚುವರಿಯೊಂದಿಗೆ 602 (96.32%) ಅಂಕಗಳನ್ನು ಗಳಿಸಿದ್ದಾರೆ. ಶಾಲಾ ಸಂಚಾಲಕರಾದ ಶ್ರೀ ಟಿ. ಕೆ. ಗಣೇಶ್ ರಾವ್, ಶ್ರೀ ಗುರುರಾಜ್ ರಾವ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಧು ಜಿ. ರಾವ್ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ಇವರು ಆದಿವುಡುಪಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾಗ್ಯಶ್ರೀ ಕಂಬಳಕಟ್ಟ ಇವರ ಸುಪುತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು