ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿ ಭರತ್‌ ಜಯರಾಮ್‌ ದಾಸ ಈತನಿಗೆ ಗಡಿಪಾರು ಆದೇಶ

ಭರತ್‌ ಜಯರಾಮ್‌ ದಾಸ, ಪ್ರಾಯ: 34 ವರ್ಷ, ತಂದೆ: ಜಯರಾಮ ದಾಸ, ವಾಸ: ಮನೆ ನಂಬ್ರ- 2-165-1, ಮೂಡುಬಿರ್ತಿ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಎಂಬುವರ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಹಾಗೂ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ಉಡುಪಿ ರವರು ದಿನಾಂಕ 14.05.2026 ರಂದು ಗಡಿಪಾರು ಆದೇಶ ಹೊರಡಿಸಿರುತ್ತಾರೆ. 

ಈತನ ವಿರುದ್ಧ ಕೋಟ ಮತ್ತು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸಿರುವ ಬಗ್ಗೆ 3 ಪ್ರಕರಣಗಳು ದಾಖಲಾಗಿರುತ್ತದೆ. ಈ ಪೈಕಿ 1 ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಉಳಿದ 2 ಪ್ರಕರಣಗಳು ತನಿಖೆಯಲ್ಲಿದೆ. 

ಈತನನ್ನು ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು