“ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಜ್ಞಾನಮಂದಿರ ದಲ್ಲಿ “ವಸಂತ ವೇದ ಶಿಬಿರದ ಸಮಾರೋಪ”ಕೂ. ಮ. ಜ(ರಿ) ಕೇಂದ್ರ ಸಂಸ್ಥೆಯ ಅಧ್ಯಕ್ಷ ಶ್ರೀ ಹೆಚ್. ಸತೀಶ ಹಂದೆಯವರ ಅಧ್ಯಕ್ಷತೆಯಲ್ಲಿಜರುಗಿತು.
ನಮ್ಮ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಸಂಸ್ಕಾರಯುತ ಬದುಕಿಗೆ ಶ್ರೀ ದೇವಳದ ವತಿಯಿಂದ ಮೂರು ವಾರಗಳ ನಡೆದ ವಸಂತ ವೇದ ಶಿಬಿರವು ಅತ್ಯಂತ ಯಶಸ್ವೀಯಾಗಿ ಜರಗಿದೆ ಅಂತ ತಿಳಿಸಲು ಬಹಳ ಸಂತೋಷವಾಗಿದೆ ಎಂದು ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಶ್ರೀ ಪ್ರಕಾಶ ಕಾರಂತರಸಮಾರೋಪ ಸಮಾರಂಭದಲ್ಲಿ,ಪ್ರಾಸ್ಥಾವಿಕ ನುಡಿ ನುಡಿದು ಗಣ್ಯರನ್ನುಸ್ವಾಗತಿಸಿ ಹೇಳಿದರು.ಶಿಬಿರಾರ್ಥಿಗಳ ವೇದ ಘೋಷದಿಂದ ಆರಂಭಗೊಂಡ ಸಮಾರಂಭದಲ್ಲಿ ,ಶಿಬಿರದ ಸಂಕ್ಷಿಪ್ತ ವರದಿಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಸಿ. ಚಂದ್ರಶೇಖರ ಉಪಾಧ್ಯ ಮಂಡಿಸಿದರು.
ಸಹ ಪ್ರಬಂಧಕ ಗಣೇಶ ಭಟ್ಟರು ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲು ಪಟ್ಚಿಯನ್ನು ಓದಿದರು.ನಿಗಮಾಗಮ ಶಾಲೆಯ ಅಧ್ಯಾಪಕ ವಾದಿರಾಜ ಐತಾಳರು ಸಹಕರಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಪೂರ್ವ ಅಧ್ಯಕ್ಷ ಎ.ಜಗದೀಶ ಕಾರಂತ, ಉದ್ಯಮಿ ಶ್ರೀ ರಘನಾಥ ಸೋಮಯಾಜಿ,ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೆ.ತಾರಾನಾಥ ಹೊಳ್ಳ, ಶ್ರೀ ಚಂದ್ರಶೇಖರ ನಾವುಡ, ಶ್ರೀ ಪ್ರಸನ್ನ ತುಂಗ, ಸಾಲಿಗ್ರಾಮ ಅಂಗಸಂಸ್ಥೆಯ ಕಾರ್ಯದರ್ಶಿ ಶ್ರೀ ಮಹಾಬಲ ಹೇರ್ಳೆ,ಮುಂತಾದವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ಶ್ರೀ ಗುರು ನರಸಿಂಹ ದೇವಳದ ಶ್ರೀ ಗುರು ನರಸಿಂಹ ನಿಗಮಾಗಮ ವೇದಪಾಠ ಶಾಲೆಯಲ್ಲಿ ಐದು ವರ್ಷಗಳ ಕಾಲ ಋಗ್ವೇದ ವೇದ ಅಧ್ಯಯನವನ್ನು ಮತ್ತು ಸಂಸ್ಕೃತ ಪಾಠವನ್ನು ಕಲಿತು ಪೂರ್ಣಗೊಳಿಸಿದ ಶ್ರೀ ವತ್ಸ, ಶ್ರೀಕಾಂತ ,ಹಾಗೂ ಶ್ರೀ ವರುಣ ಇವರುಗಳನ್ನು ಸನ್ಮಾನಿಸಲಾಯಿತು. ದಾನಿ ಶ್ರೀ ಸುಧೀಂದ್ರ, ಬೆಂಗಳೂರು ಇವರನ್ನು ಗುರುತಿಸಲಾಯಿತು.ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ಪರಶುರಾಮ ಭಟ್ಟರು ವಂದನಾರ್ಪಣೆ ಮತ್ತು ಸಾಮೂಹಿಕ ಐಕ್ಯ ಮಂತ್ರ ಪಠಣದೊಂದಿಗೆ ಸಂಪನ್ನಗೊಂಡ ಕಾರ್ಯಕ್ರಮ ದ ನಿರ್ವಹಣೆಯನ್ನು ಸಹಾಯಕ ಸಿಬ್ಬಂದಿ ಅಖಿಲೇಶ ಐತಾಳ ಮಾಡಿದರು.

0 ಕಾಮೆಂಟ್‌ಗಳು