ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ

ದಿನಾಂಕ 27/05/2026- ಉಡುಪಿ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಉಡುಪಿ ಜಿಲ್ಲೆಯ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಎರಡು ತಕರಾರು ಪತ್ರಗಳನ್ನು ಸಲ್ಲಿಸಲಾಯಿತು.

ಮೊದಲನೆಯದಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ MESCOM/COML/RA/26/2024-COML/- part(2)/1736-37 ದಿನಾಂಕ 27.06.2025 ಮತ್ತು RP No. 08/2025 ರಲ್ಲಿ ಮಾನ್ಯ ಕ.ವಿ.ನಿ ಆಯೋಗವು ನೀಡಿದ ಆದೇಶ ದಿನಾಂಕ 03.03.2026 ರ ಆದೇಶದಂತೆ ತಾವು ಎಲ್ಲಾ ಕೈಗಾರಿಕೆಗಳಿಗೆ 2025-26 ನೇ ಸಾಲಿನ ಬಾಕಿ ಇದೆ ಎಂದು ಬಿಲ್‌ ಅನ್ನು ಕಳುಹಿಸಿರುತ್ತಾರೆ. ನಾವು ಆದೇಶವನ್ನು ಪರಿಶೀಲಿಸಿದಾಗ ಕೃಷಿ ಪಂಪ್‌ ಸೆಟ್‌ಗಳಿಗೆ ನೀಡಬೇಕಾದ ಸಹಾಯ ಧನವನ್ನು ಕರ್ನಾಟಕ ಸರಕಾರ ಬಿಡುಗಡೆಗೊಳಿಸಬೇಕಿತ್ತು. ಅವರು ಆ ಸಹಾಯ ಧನವನ್ನು ಬಿಡುಗಡೆ ಮಾಡದೇ ಇದ್ದುದರಿಂದ ಆ ಐವೇಜನ್ನು ಕೈಗಾರಿಕೆ ಮತ್ತು ವಾಣಿಜ್ಯ ಮಳಿಗೆಗಳ ಮೇಲೆ ಹೇರಿದ್ದಾರೆ. ಇದು ನಮ್ಮ ಕೈಗಾರಿಕೆಗಳ ಮೇಲೆ ಮಾಡಿದ ಅನ್ಯಾಯ. ಆದುದರಿಂದ ಈ ಹಿಂಬಾಕಿಯನ್ನು ಕೂಡಲೇ ಹಿಂಪಡೆದುಕೊಂಡು ಕೇವಲ ನಾವು ಉಪಯೋಗಿಸಿದ ವಿದ್ಯುಚ್ಛಕ್ತಿಯ ದರವನ್ನು ಮಾತ್ರ ವಸೂಲಿ ಮಾಡುವಂತೆ ಮೆಸ್ಕಾಂ ನ ಘಟಕಕ್ಕೆ ಆದೇಶಿಸಬೇಕಾಗಿ ಈ ಮೂಲಕ ವಿನಂತಿಸಿಕೊಂಡಿದ್ದೇವೆ.

ಎರಡನೆಯದಾಗಿ ಕನಿಷ್ಠ ವೇತನ 60% ಜಾಸ್ತಿ ಮಾಡಿದ ಬಗ್ಗೆ ನಮ್ಮ ತಕರಾರು. ಕಾರ್ಮಿಕರ ವೇತನವನ್ನು ಎಲ್ಲಾ ಕೈಗಾರಿಕೆ ಉದ್ಯಮಗಳು ಪ್ರತಿ ವರ್ಷ ಹೆಚ್ಚಿಸುತ್ತ ಇದ್ದರು ಸಹ ಈಗಿನ ಸಂದರ್ಭದಲ್ಲಿ ಏಕಾಏಕಿ 60% ವೇತನ ಹೆಚ್ಚಳ ಮಾಡಿದ್ದು ಎಂಎಸ್ಎಂಇ ವಲಯದ ಉದ್ದಿಮೆಗಳಿಗೆ ಹೊರೆಯಾಗುತ್ತಿದೆ. ಈಗಾಗಲೇ ನಮ್ಮ ಎಲ್ಲಾ ಕೈಗಾರಿಕೆಗಳು ಯುದ್ಧದ ವೈಪರಿತ್ಯದಿಂದ ಡೀಸೆಲ್ ಬೆಲೆ ಹಾಗು ಸಾಗಾಟದ

ವೆಚ್ಚ ಮತ್ತು ಕಚ್ಚಾವಸ್ತುಗಳ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಈ ಒಂದು ಏರಿಕೆಯಿಂದಾಗಿ ನಾವು ನಮ್ಮ ಕೈಗಾರಿಕೆಗಳನ್ನು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಅತಿಸಣ್ಣ ಮತ್ತು ಸಣ್ಣ ಉದ್ದಿಮೆಗಳು ತರಬೇತಿ ಕೇಂದ್ರ ಇದ್ದಂತೆ, ಕನಿಷ್ಠ ವೇತನ ಹೆಚ್ಚಳದ ಕಾರಣದಿಂದಾಗಿ ಅವು ನೇಮಕಾತಿ ಕಡಿಮೆ ಮಾಡಿದರೆ ನಿರುದ್ಯೋಗ ಪ್ರಮಾಣ ಹೆಚ್ಚಬಹುದು. ಈ ವಲಯದ ಉದ್ದಿಮೆಗಳ ನೆರವಿಗೆ ಸರ್ಕಾರ ಬರಬೇಕು ಎಂದು ಕಳಕಳಿಯಿಂದ ಕೇಳಿಕೊಳ್ಳಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು