BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ರಾಜಕೀಯ

ಟಿಎಂಸಿ ಅಟ್ಟಹಾಸಕ್ಕೆ ಬ್ರೇಕ್ — ಬಂಗಾಳದಲ್ಲಿ ಬಿಜೆಪಿ ಯುಗಾರಂಭ - ಶ್ರೀನಿಧಿ ಹೆಗ್ಡೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿಯ ಆಡಳಿತಕ್ಕಾಗಿ ಹಾಗೂ ದೇಶದ ಸುಭದ್ರತೆಗಾಗಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಬಿಜೆಪಿ ಸಂಘಟನಾ ಶಕ್ತಿಗೆ ಈ ಫಲಿತಾಂಶ ಹೊಸ ಹುಮ್ಮಸ್ಸು ನೀಡಲಿದೆ ಹಾಗೂ ಈ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ದೇಶ ದ್ರೋಹ ಶಕ್ತಿ ಕ್ಷೀಣಿಸುತ್ತಿರುವ ಲಕ್ಷಣ ಕಂಡುಬಂದಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ತಿಳಿಸಿದ್ದಾರೆ.

ರಾಜಕೀಯ ಹಿಂಸಾಚಾರ, ಓಲೈಕೆ ರಾಜಕಾರಣ, ಅಕ್ರಮ ವಲಸಿಗರ ಪುಂಡಾಟ ಮೊದಲಾದವುಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅವಿಚ್ಛಿನ್ನ ಸಂಘಟನಾ ಶಕ್ತಿ, ಗೆಲ್ಲಲೇಬೇಕೆಂಬ ಹಠ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾರಣವಾಗಿದೆ.

ಪಶ್ಚಿಮ ಬಂಗಾಳದ ರಾಜಕೀಯ ಕಳೆದ ಹಲವಾರು ವರ್ಷಗಳಿಂದ ಹಿಂಸಾಚಾರ, ಮತ ಬ್ಯಾಂಕ್ ರಾಜಕೀಯ, ವಲಸೆ ವಿವಾದಗಳು ಹಾಗೂ ಚುನಾವಣಾ ಪ್ರಕ್ರಿಯೆಗಳ ಸುತ್ತ ಉದ್ಭವಿಸಿದ ಸಂಘರ್ಷಗಳಿಂದಲೇ ಚರ್ಚೆಗೆ ಗ್ರಾಸವಾಗಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳ ಆ ಬಳಿಕ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ(ಎಂ) ಹಿಡಿತದಲ್ಲಿತ್ತು. ಯಾವಾಗ ನಂದಿಗ್ರಾಮ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಮುಂಚೂಣಿಗೆ ಬಂದರೋ ಅಲಿಂದ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್‌ ತೆಕ್ಕೆಗೆ ಜಾರಿತು. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಆಡಳಿತಕ್ಕೆ ಬಂದರೂ, ರಾಜಕೀಯ ಹಿಂಸಾಚಾರದ ಆರೋಪಗಳು ಕಡಿಮೆಯಾಗಿರಲಿಲ್ಲ ಮತ್ತು ಅಲ್ಲಿಂದ ಅದು ಮತ್ತೊಂದು ಸ್ವರೂಪ ಪಡೆದಿತ್ತು.

ಚುನಾವಣೆಗಳ ಸಂದರ್ಭ ಹಾಗೂ ನಂತರ ನಡೆದ ಹಿಂಸಾಚಾರದಲ್ಲಿ ಬಿಜೆಪಿಯ ಅನೇಕ ಕಾರ್ಯಕರ್ತರು ಪ್ರಾಣತ್ಯಾಗ ಮಾಡಿದ್ದರು. 2021ರ ವಿಧಾನಸಭಾ ಚುನಾವಣೆ ಬಳಿಕ ಕನಿಷ್ಠ 11 ಸಾವುಗಳು ದಾಖಲಾಗಿದ್ದವು. ಬಿಜೆಪಿ ತನ್ನ 24ಕ್ಕೂ ಹೆಚ್ಚು ಕಾರ್ಯಕರ್ತರನ್ನ ಕಳೆದುಕೊಂಡಿತ್ತು. 300ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಈ ವರ್ಷಗಳ ಅವಧಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಅಮಿತ್‌ ಷಾ ತಿಳಿಸಿರುವುದು ಮಮತಾ ಬ್ಯಾನರ್ಜಿ ಅವರ ಕ್ರೂರ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಈ ಅಂಕಿಅಂಶಗಳು ಮತ್ತಷ್ಟು ಹೆಚ್ಚಿರಬಹುದು ಯಾಕೆಂದರೆ ತಳಮಟ್ಟದಲ್ಲಿ ಟಿಎಂಸಿ ವಿರುದ್ಧ ದ್ವನಿ ಎತ್ತಲು ಸಾಧ್ಯವಿಲ್ಲದ ವಾತಾವರಣವನ್ನೇ ಆ ಪಕ್ಷದ ಗೂಂಡಾಗಳು ನಿರ್ಮಿಸಿದ್ದಾರೆ, ಬಿಜೆಪಿ ಕಾರ್ಯಕರ್ತರು ಜೀವವನ್ನು ಪಣಕ್ಕಿಟ್ಟು ರಾಜಕೀಯ ಹೋರಾಟ ನಡೆಸಿದ್ದಾರೆ ಎಂಬುದು ನಿರಾಕರಿಸಲಾಗದ ವಾಸ್ತವ.

ಮನೆಗಳನ್ನು ಕಳೆದುಕೊಂಡ ಕುಟುಂಬಗಳು, ಊರು ಬಿಟ್ಟು ತೆರಳಬೇಕಾದ ಕಾರ್ಯಕರ್ತರು, ಭಯದ ವಾತಾವರಣದಲ್ಲೂ ಪಕ್ಷದ ಧ್ವಜ ಹಿಡಿದು ನಿಂತ ಸಾವಿರಾರು ಕಾರ್ಯಕರ್ತರ ತ್ಯಾಗವೇ ಇಂದು ಬಿಜೆಪಿಯ ಸಂಘಟನಾ ಬಲಕ್ಕೆ ಬೆನ್ನೆಲುಬಾಗಿದೆ. ಇದು ಕೇವಲ ಚುನಾವಣಾ ಪೈಪೋಟಿಯಲ್ಲ — ಅನೇಕ ಕಾರ್ಯಕರ್ತರಿಗೆ ಇದು ನಿಜಕ್ಕೂ ಜೀವನ್ಮರಣದ ಹೋರಾಟವಾಗಿತ್ತು. ಇದರ ಜೊತೆಗೆ, ಮತಬ್ಯಾಂಕ್ ರಾಜಕೀಯ ಹಾಗೂ ಅಕ್ರಮ ವಲಸೆ ಪ್ರಶ್ನೆಯೂ ರಾಜ್ಯ ರಾಜಕೀಯದ ಕೇಂದ್ರಬಿಂದುವಾಯಿತು. ವಿಶೇಷವಾಗಿ ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಷಯದಲ್ಲಿ ಬಿಜೆಪಿ ನಿರಂತರವಾಗಿ ಧ್ವನಿ ಎತ್ತಿ, ರಾಜ್ಯದ ಜನಸಾಂಖ್ಯಿಕ ಮತ್ತು ಭದ್ರತಾ ಸಮತೋಲನದ ಬಗ್ಗೆ ಕಾಳಜಿ ವ್ಯಕ್ತಪಡಿಸಿತು. ಇದೇ ಹಿನ್ನೆಲೆದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆಗಾಗಿ ನಡೆದ SIR (Special Intensive Revision) ಪ್ರಕ್ರಿಯೆಯೂ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಬಿಜೆಪಿ ಇದನ್ನು ಮತದಾರರ ಪಟ್ಟಿಯ ಶುದ್ಧೀಕರಣದ ಹೆಜ್ಜೆ ಎಂದು ಬೆಂಬಲಿಸಿದರೆ, ವಿರೋಧ ಪಕ್ಷಗಳು ಇದನ್ನು ರಾಜಕೀಯ ಉದ್ದೇಶದ ಕ್ರಮವೆಂದು ಟೀಕಿಸಿವೆ.

ಇಂತಹ ಪ್ರತಿಕೂಲ ವಾತಾವರಣದ ನಡುವೆಯೂ ಬಿಜೆಪಿ ಬೆಂಬಲ ಹೆಚ್ಚಿಸಿಕೊಂಡಿರುವುದು ಕೇವಲ ರಾಜಕೀಯ ಲೆಕ್ಕಾಚಾರದ ಫಲವಲ್ಲ. ನೆಲಮಟ್ಟದಲ್ಲಿ ಬೂತ್ ಮಟ್ಟದಿಂದ ಹಿಡಿದು ಗ್ರಾಮ ಮಟ್ಟದವರೆಗೆ ಕಾರ್ಯಕರ್ತರು ನಡೆಸಿದ ಸಂಘಟಿತ ಹೋರಾಟ, ಜನರ ಮಧ್ಯೆ ನಿರಂತರ ಸಂಪರ್ಕ, ಮತ್ತು ಪಕ್ಷದ ಪರವಾಗಿ ನಡೆದ ದೀರ್ಘಕಾಲದ ಶ್ರಮ ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದರೊಂದಿಗೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಅಜೆಂಡಾಗಳಿಗೂ ಜನರಿಂದ ಸ್ಪಂದನೆ ದೊರೆತಿದೆ. ಮೂಲಸೌಕರ್ಯ ಅಭಿವೃದ್ಧಿ, ಬಡವರ ಕಲ್ಯಾಣ ಯೋಜನೆಗಳು, ಡಿಜಿಟಲ್ ಸೌಲಭ್ಯಗಳ ವಿಸ್ತರಣೆ, ಗ್ರಾಮೀಣ ಸಂಪರ್ಕ ವೃದ್ಧಿ — ಇವೆಲ್ಲವೂ ಜನಮನದಲ್ಲಿ ವಿಶ್ವಾಸ ಮೂಡಿಸಿರುವ ಅಂಶಗಳಾಗಿ ಕಾಣಿಸುತ್ತಿವೆ. ಹಿಂಸಾಚಾರ, ಮತಬ್ಯಾಂಕ್ ರಾಜಕೀಯ, ವಲಸೆ ವಿವಾದ ಮತ್ತು ಆಡಳಿತಾತ್ಮಕ ಸಂಘರ್ಷಗಳ ನಡುವೆಯೂ ಬಿಜೆಪಿ ಇಂದು ಬೆಂಬಲ ಗಳಿಸಿರುವುದು ಒಂದು ಸ್ಪಷ್ಟ ಸಂದೇಶ ನೀಡುತ್ತದೆ.

ಜನರು ಭಯದ ರಾಜಕಾರಣಕ್ಕಿಂತ ಭದ್ರತೆ, ಸ್ಥಿರತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.

ಭರ್ಜರಿ ಬಹುಮತದತ್ತ ಗಳಿಸಿದ ಬಿಜೆಪಿ, ಬಂಗಾಳದಲ್ಲಿ ಹೊಸ ಅಧ್ಯಾಯ

ಈ ಎಲ್ಲಾ ಅಂಶಗಳ ಒಟ್ಟಾರೆ ಪರಿಣಾಮವಾಗಿ, ಬಿಜೆಪಿ ಐತಿಹಾಸಿಕ ಸಾಧನೆ ಮಾಡಿ 180+ ಸ್ಥಾನಗಳ ದಾಟುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ಅಧ್ಯಾಯವನ್ನು ಆರಂಭಿಸಿದೆ... ದೀರ್ಘಕಾಲದ ಸಂಘರ್ಷ, ಕಾರ್ಯಕರ್ತರ ತ್ಯಾಗ ಮತ್ತು ಜನರ ವಿಶ್ವಾಸದ ಫಲವಾಗಿ ಈ ಬೆಳವಣಿಗೆ ಸಂಭವಿಸಿದೆ.


ಟಿಎಂಸಿ ಅಟ್ಟಹಾಸಕ್ಕೆ ಬ್ರೇಕ್ — ಗೆಲುವಿನ ಪ್ರಮುಖ ಕಾರಣಗಳು.

👉 ಹಿಂಸಾಚಾರದ ವಿರುದ್ಧ ಜನರ ಪ್ರತಿಕ್ರಿಯೆ

👉 ಮತಬ್ಯಾಂಕ್ ರಾಜಕೀಯದ ವಿರುದ್ಧ ಅಸಮಾಧಾನ

👉 ಅಕ್ರಮ ವಲಸೆ ವಿಚಾರದ ಬಿಜೆಪಿ ಸ್ಪಷ್ಟ ನಿಲುವು.

👉 SIR ಪ್ರಕ್ರಿಯೆ ಮೂಲಕ ಮತದಾರರ ಪಟ್ಟಿಗಳ ಬಗ್ಗೆ ಜಾಗೃತಿ

👉 ಕೇಂದ್ರದ ಅಭಿವೃದ್ಧಿ ಯೋಜನೆಗಳ ಮೇಲೆ ವಿಶ್ವಾಸ

👉 ತಳಮಟ್ಟದ ಕಾರ್ಯಕರ್ತರ ಸಂಘಟಿತ ಶ್ರಮ.


ಹಿಂಸಾಚಾರ, ಮತಬ್ಯಾಂಕ್ ರಾಜಕೀಯ, ವಲಸೆ ವಿವಾದ ಮತ್ತು ಆಡಳಿತಾತ್ಮಕ ಸಂಘರ್ಷಗಳ ನಡುವೆಯೂ ಬಿಜೆಪಿ ಬೆಂಬಲ ಗಳಿಸಿರುವುದು ಒಂದು ಸ್ಪಷ್ಟ ಸಂದೇಶ ನೀಡುತ್ತದೆ.

ಜನರು ಭಯದ ರಾಜಕಾರಣಕ್ಕಿಂತ ಭದ್ರತೆ, ಸ್ಥಿರತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.

ಬಂಗಾಳದಲ್ಲಿ ನಡೆಯುತ್ತಿರುವ ಈ ಬದಲಾವಣೆ, ರಾಜ್ಯದ ರಾಜಕೀಯದಲ್ಲಿ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕಿನಲ್ಲಿಯೂ ಮಹತ್ವದ ಸೂಚನೆ ನೀಡುತ್ತಿದೆ. ಈ ಎಲ್ಲಾ ಸವಾಲುಗಳ ನಡುವೆ, ಬಂಗಾಳದ ರಾಜಕೀಯದಲ್ಲಿ ಹೊಸ ಆಯಾಮವಾಗಿ ರಾಷ್ಟ್ರೀಯತೆಯ ಭಾವನೆ ಪ್ರಾಬಲ್ಯ ಪಡೆದಿದೆ. ದೇಶದ ಏಕತೆ, ಭದ್ರತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ರಾಜಕೀಯದತ್ತ ಜನರು ತಿರುಗುತ್ತಿದ್ದಾರೆ ಎಂಬ ಸಂದೇಶ ಸ್ಪಷ್ಟವಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರ ಒಟ್ಟಾದ ಶ್ರಮದಿಂದಾಗಿ ಕಮಲ ಇನ್ನಷ್ಟು ಅರಳಿ ಬಲವಾಗಿದೆ. ಚುನಾವಣೆಯಲ್ಲಿ ಶ್ರಮಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!