ಈ ದಿನದಂದು ಈ ಪವಿತ್ರ ಪುಷ್ಕರಣಿಯಲ್ಲಿ ಸ್ನಾನ ಮಾಡಿದಲ್ಲಿ ಭಕ್ತಾದಿಗಳ ಶಾರೀರಿಕ ಖಾಯಿಲೆಗಳು ಮುಖ್ಯವಾಗಿ ಚರ್ಮರೋಗ ನಿವಾರಣೆಯಾಗುವುದಲ್ಲದೆ* ಸದ್ಭಕ್ತರ ಸಕಲ ಇಷ್ಟಾರ್ಥವು ನೆರವೇರಲಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿರುತ್ತದೆ.
ಬೆಳಿಗ್ಗೆ 6:21 ಕ್ಕೆ ಗಂಗಾ ಪೂಜೆ ನಡೆಯಲಿದ್ದು 11 ಗಂಟೆಯ ತನಕ ತೀರ್ಥ ಸ್ನಾನ ನಡೆಯಲಿದೆ.
ಆದ್ದರಿಂದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸನ್ನಿಹಿತವಾಗಿರುವ ಈ ಕ್ಷೇತ್ರದಲ್ಲಿ ಸದ್ಭಕ್ತರೆಲ್ಲರೂ ತಾರೀಕು 11.09.2026 ನೇ ಶುಕ್ರವಾರ ಅಮಾವಾಸ್ಯೆಯ ದಿನ ಈ ಪವಿತ್ರ ಸರೋವರದಲ್ಲಿ ತೀರ್ಥ ಸ್ನಾನ ಮಾಡಿ ಶ್ರೀ ದೇವರಿಗೆ ಯಥಾನುಶಕ್ತಿ ಸೇವೆ ಸಲ್ಲಿಸಲು ಅವಕಾಶ ಇದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.