ಕೊಡಂಕೂರು ಫ್ರೆಂಡ್ಸ್ ರಿಜಿಸ್ಟರ್ ಕೊಡಂಕೂರು ಇವರು 30ನೇ ಕೃಷ್ಣ ಜನ್ಮಾಷ್ಠಮಿ ಮತ್ತು ಕೃಷ್ಣ ಲೀಲೋತ್ಸವ ಕಾರ್ಯಕ್ರಮವನ್ನು 05-9-2026 ಶನಿ ವಾರದಂದು ನಡೆಸಿದರು.
ಇದರ ಬೆಳಗ್ಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸಂಗೀತ ಶಿಕ್ಷಕಿ ಶ್ರೀಮತಿ ಸ್ಮಿತಾ ನಾಗರಾಜ್ ಹಾಗೂ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಕೆಮ್ಮಣ್ಣು ಇಲ್ಲಿನ ಶಿಕ್ಷಕಿ ಶ್ರೀಮತಿ ದಿವ್ಯ ಕುಮಾರಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಯಶವoತ್ ಎಸ್ ಪೂಜಾರಿ, ಶ್ರೀ ಪ್ರವೀಣ್ ಸುವರ್ಣ ಪ್ರವರ್ತಕರು ಸ್ಟಾರ್ gypsum ಕೊಡಂಕೂರು. ಉದ್ಯಮಿಗಳಾದ ಜಯ ಪಿ ಸನಿಲ್, ಶ್ರೀ ಅಣ್ಣಯ್ಯ, ಶ್ರೀ ಉಮೇಶ್ ಪೂಜಾರಿ ಶ್ರೀದೇವಿ ಶಾಮಿಯಾನ ಕೊಡಂಕೂರು, ಶ್ರೀ ಶೇಖರ್ ಕೊಡಂಕೂರು ಅಧ್ಯಕ್ಷರು ದ. ಸಂ. ಸ. ಅಂಬೇಡ್ಕರ್ ವಾದ, ಶ್ರೀಮತಿ ಸಂಪಾವತಿ ನಿಕಟ ಪೂರ್ವ ನಗರಸಭಾ ಸದಸ್ಯರು ಉಡುಪಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
