ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ, ದೇವಳದ ಅರ್ಚಕರಾದ ಶ್ರೀಧರ್ ಭಟ್ ಅವರ ನೇತೃತ್ವದಲ್ಲಿ ನಡೆದ ನೂತನ ರಥಾಲಯ (ರಥದ ಕೊಟ್ಟಿಗೆ) ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಭಕ್ತಿಭಾವ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಯಶಸ್ವಿಯಾಗಿ ನೆರವೇರಿತು.
ಈ ಶುಭ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಪ್ರಖ್ಯಾತ್ ಶೆಟ್ಟಿ, ಮೊಕ್ತೇಸರರಾದ ಶ್ರೀ ಐತು ಎಂ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು ಹಾಗೂ ರಥಾಲಯದ ದಾನಿಗಳಾದ ಶ್ರೀ ಟಿ. ಶಂಬು ಶೆಟ್ಟಿ, ಭಕ್ತವೃಂದದ ಅಧ್ಯಕ್ಷರಾದ ಶ್ರೀ ಉದಯ ಕುಮಾರ್ ಶೆಟ್ಟಿ ಹಾಗೂ ಪ್ರಮುಖರಾದ ಶ್ರೀ ಅವಿರಾಜ್ ಶೆಟ್ಟಿ, ಬೆಳ್ಕಳೆ ಶ್ರೀಹರ್ಷ ಭಟ್, ಶ್ರೀ ಸುಂದರ ಶೆಟ್ಟಿ, ಶ್ರೀ ಅಜಿತ್ ಶೆಟ್ಟಿ, ಶ್ರೀ ಉಮೇಶ್ ಶೆಟ್ಟಿ, ಶ್ರೀ ಪ್ರಭಾಕರ ಅಂಚನ್, ಶ್ರೀಮತಿ ಅನುಷಾ ಆಚಾರ್ಯ, ಶ್ರೀ ಕೃಷ್ಣರಾಜ್ ಭಾದ್ಯ, ಶ್ರೀ ರಮೇಶ್ ಆಚಾರ್ಯ ಸೇರಿದಂತೆ ಗ್ರಾಮಸ್ಥರು ಹಾಗೂ ಅನೇಕ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
