ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಸುರೇಖಾ ಕೆ. ಅವರಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು “A Critical Study on the Enforcement of the Decisions of International Court of Justice” ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ನೀಡಿದೆ. ಇವರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನು ಪ್ರಸನ್ನನ್ ಅವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ.
ಶ್ರೀಮತಿ ಸುರೇಖಾ ಕೆ. ಅವರು ಮಲ್ಪೆಯ ಕೃಷ್ಣ ಮತ್ತು ಗಿರಿಜಾ ಮಬಿಯಾನ್ ದಂಪತಿಯ ಪುತ್ರಿಯಾಗಿದ್ದು, ಸದಾಶಿವ ಆದಿಉಡುಪಿ ಅವರ ಧರ್ಮಪತ್ನಿ ಹಾಗೂ ಸೂರಜ್ ಪೂಜಾರಿ ಮಲ್ಪೆ ಅವರ ಸಹೋದರಿಯಾಗಿದ್ದಾರೆ.

0 ಕಾಮೆಂಟ್‌ಗಳು