ಮೇ 17: ತೆಂಕನಿಡಿಯೂರು ಕಾಲೇಜಿನಲ್ಲಿ ಅಂಚೆಚೀಟಿ, ನಾಣ್ಯ ಪ್ರದರ್ಶನ

ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ಹಳೆ ವಿದ್ಯಾರ್ಥಿ ಸಂಘದ ಸಮ್ಮಿಲನ ಕಾರ್ಯಕ್ರಮ ಬೆಸುಗೆ 2026 ಮೇ 17 ಭಾನುವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದ್ದು ಅಂದು ಕಾಲೇಜಿನ ಆವರಣದಲ್ಲಿ ಖ್ಯಾತ ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಕಾರರಾದ ಕೆ. ಲಕ್ಷ್ಮೀನಾರಾಯಣ ನಾಯಕ್ ಅವರ ನಾಣ್ಯ ಹಾಗೂ ಅಂಚೆಚೀಟಿ ಪ್ರದರ್ಶನ ನಡೆಯಲಿದೆ. ಇವರ ಬಳಿ 175 ಕ್ಕೂ ಹೆಚ್ಚಿನ ದೇಶಗಳ ನಾಣ್ಯ, ನೋಟು ಹಾಗೂ 190 ರಾಷ್ಟ್ರಗಳ ಅಂಚೆಚೀಟಿಗಳ ಅಪಾರ ಸಂಗ್ರಹವಿದ್ದು ಪ್ರದರ್ಶನಕ್ಕೆ ವಿಶೇಷ ಮೆರುಗು ನೀಡಲಿದೆ. ಸುಮಾರು 4 ದಶಕಗಳಿಂದ ನಾಣ್ಯ ಹಾಗೂ ಅಂಚೆಚೀಟಿ ಸಂಗ್ರಹ ನಡೆಸುತ್ತಿರುವ ಇವರು ಈಗಾಗಲೇ ಜಿಲ್ಲಾಧಿಕಾರಿ ಕಛೇರಿ, ಕಾರಂತ ಥೀಮ್ ಪಾರ್ಕ್ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಪ್ರಾಂಶುಪಾಲರು, ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರು, ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು