ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಕಳೆದ ತಿಂಗಳು ಯಕ್ಷಶಿಕ್ಷಣದ ವಿದ್ಯಾರ್ಥಿಗಳಿಗೆ ಒಂದು ವಾರದ ಸನಿವಾಸ ಶಿಬಿರ ಆಯೋಜಿಸಿತ್ತು. ಅದರಲ್ಲಿ 103 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅವರಲ್ಲಿ ಆಸಕ್ತ 35 ವಿದ್ಯಾರ್ಥಿಗಳಿಗೆ ಮೆ 11 ರಿಂದ 14 ವರೆಗೆ ನಡೆಸಲಿರುವ ನಾಲ್ಕು ದಿನಗಳ ಮುಖವರ್ಣಿಕೆ ವೇಷಭೂಷಣ ಶಿಬಿರವನ್ನು ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯರು ಇಂದು (11.05.2026) ಉದ್ಘಾಟಿಸಿದರು. ಎಂ. ಗಂಗಾಧರ ರಾವ್ ಅಧ್ಯಕ್ಷತೆವಹಿಸಿದ್ದರು. ಮುರಲಿ ಕಡೆಕಾರ್ ಕಾರ್ಯಕ್ರಮ ಸಂಯೋಜಿಸಿದ್ದರು. ನಾರಾಯಣ ಎಂ. ಹೆಗಡೆ, ಪ್ರಸಾಧನ ತಜ್ಞ ಮಿಥುನ್ ನಾಯಕ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಟ್ಟಡದಲ್ಲಿ ನಡೆಯುತ್ತಿರುವ ಶಿಬಿರಕ್ಕೆ ಗುರು ಬನ್ನಂಜೆ ಸಂಜೀವ ಸುವರ್ಣರು ಭೇಟಿಯಿತ್ತು ಮಕ್ಕಳಿಗೆ ಉಪಯುಕ್ತ ಮಾರ್ಗದರ್ಶನ ನೀಡಿದರು.

0 ಕಾಮೆಂಟ್‌ಗಳು