ಉಡುಪಿ ವಾಹನ ನಿಲುಗಡೆ ಅವ್ಯವಸ್ಥೆ: ಮಲ್ಟಿ ಪಾರ್ಕಿಂಗ್ ತಾಣಕ್ಕೆ ಉಡುಪಿ ಕಲ್ಯಾಣ ವೇದಿಕೆ ಮನವಿ

ಉಡುಪಿಯಲ್ಲಿ ವಾಹನ ನಿಲುಗಡೆ (parking) ಅವ್ಯವಸ್ಥೆಯನ್ನು ಶೀಘ್ರವಾಗಿ ಪರಿಹರಿಸುವಲ್ಲಿ ಮುತುವರ್ಜಿ ವಹಿಸುವಂತೆ ಉಡುಪಿಯ ಶಾಸಕ ಶ್ರೀ. ಯಶ್ ಪಾಲ್ ಸುವರ್ಣ ಅವರಿಗೆ ಉಡುಪಿ ಕಲ್ಯಾಣ ವೇದಿಕೆಯ ಅಧ್ಯಕ್ಷ ಸಿ. ಎ. ಶ್ರೀ ರಾಜಾರಾಮ ಶೆಟ್ಟಿ, (ಹೆಸರಾಂತ ಲೆಕ್ಕ ಪರಿಶೊಧಕರು) ಅವರು ಅರ್ಜಿಯನ್ನು ಸಲ್ಲಿಸಿ, ಪೇಟೆಯ ಮಧ್ಯದಲ್ಲಿರುವ ಧೂಮಾವತಿ ಬೂತಸ್ಧಾನದ ಸುತ್ತಲಿನ ಜಾಗ ಕೆಡವಲಾಗಿದ್ದು ಆ ಸ್ಥಳವನ್ನು ಮಲ್ಟಿ ಪಾರ್ಕಿಂಗ್ ತಾಣವಾಗಿ ಪರಿವರ್ತಿಸುವಂತೆ ವಿನಂತಿಸಿದರು. ಖ್ಯಾತ ಉದ್ಯಮಿ ಶ್ರೀ ಕೃಷ್ಣ ಕೊಡಂಚ, ವೇದಿಕೆಯ ಗೌರವಾಧ್ಯಕ್ಷ ಶ್ರೀ. ಡಿ. ಶ್ರೀಧರ ಶೇಣವ ಹಾಗೂ ಇತರ ನಿರ್ದೇಶಕರು ಜತೆಯಲ್ಲಿದ್ದರು. ವೇಗವಾಗಿ ಬೆಳೆಯುತ್ತಿರುವ ಉಡುಪಿಯ ಪಾರ್ಕಿಂಗಿನ ಸಮಸ್ಯೆಯ ಅರಿವಿದೆ. ಸೂಕ್ತ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಸದ್ಯದಲ್ಲೇ ಇದೆ ಎಂಬ ಭರವಸೆಯನ್ನು ಶಾಸಕರು ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು