ಹಾರ್ಮುಜ್ ಜಲಸಂಧಿ ಮತ್ತೆ ಬಂದ್ - ಪ್ರಪಂಚಕ್ಕೆ ಶಾಕ್!

ಟೆಹರಾನ್: ಲೆಬನಾನ್ (Lebanon) ಮೇಲೆ ಇಸ್ರೇಲ್ (Israel) ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು (Strait Of Hormuz,) ಮತ್ತೆ ಮುಚ್ಚಿದೆ. ಈ ಕ್ರಮ ಶಾಂತಿ ಒಪ್ಪಂದ ಉಲ್ಲಂಘನೆಗೆ ಪ್ರತಿಯಾಗಿ ಕೈಗೊಂಡ ಮೊದಲ ಹೆಜ್ಜೆ ಎಂದು ಇರಾನ್ ಹೇಳಿಕೊಂಡಿದೆ.

ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿವೆ. ಇದಕ್ಕಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಇರಾನ್‌ನ ಉನ್ನತ ಜಂಟಿ ಮಿಲಿಟರಿ ಕಮಾಂಡ್, ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ ತಿಳಿಸಿದೆ ಎಂದು ವರಿಯಾಗಿದೆ. 

ಇದೇ ರೀತಿ ಆಕ್ರಮಣ ಮುಂದುವರಿದರೆ ಹೆಚ್ಚಿನ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ ಎಂದು ಇರಾನ್‌ ಎಚ್ಚರಿಸಿದೆ.

ಲೆಬನಾನ್(Lebanon) ಮೇಲೆ ಇಸ್ರೇಲ್ (Israel) ದಾಳಿ ಮುಂದುವರೆದಿದೆ. ಇಂದು (ಜೂ.20) ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಗೆ 5 ಜನ ಬಲಿಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು