ದಿನಾಂಕ:21.06.1990 ರಂದು ಉಡುಪಿ ನಗರ ಠಾಣೆಯಲ್ಲಿ ಅಕ್ರ ನಂ: 83/1990 ಕಲಂ: 86, 87 ಕರ್ನಾಟಕ ಅರಣ್ಯ ಕಾಯ್ದೆಯಂತೆ ದಾಖಲಾದ ಪ್ರಕರಣದ ಆರೋಪಿ ನೂರುಲ್ಲ ಪ್ರಾಯ:66 ವರ್ಷ, ತಂದೆ: ಭಾಷಾ ಸಾಹೇಬ್, ವಾಸ: ನಿಟ್ಟೂರು, ಹಿರೇಕೆರೂರು ತಾಲೂಕು ಹಾವೇರಿ ಜಿಲ್ಲೆ ಎಂಬಾತನನ್ನು ದಿನಾಂಕ: 22.06.1990 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ: 06.07.1990 ರವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ತದ ನಂತರ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯ ವಿರುದ್ಧ ಎಲ್ಪಿಸಿ ನಂ: 01/1998 ರಂತೆ ಹೊರಡಿಸಿರುತ್ತದೆ.
ಸದರಿ ಆರೋಪಿ ನೂರುಲ್ಲ ಎಂಬಾತನನ್ನು ಪತ್ತೆ ಮಾಡಲು ಉಡುಪಿ ನಗರ ಠಾಣೆಯ ಪ್ರಭಾರ ನಿರೀಕ್ಷಕರಾದ ಮಹೇಶ ಪ್ರಸಾದ್ ರವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಠಾಣಾ ಪಿಎಸ್ ಐ ಭರತೇಶ ಕಂಕಣವಾಡಿ, ಈರಣ್ಣ ಶಿರಗುಂಪಿ, ರತ್ನಾಕರ ಕೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್ ಸಿ ಪ್ರಸನ್ನ.ಸಿ. ಹೆಚ್ ಸಿ ಜೀವನ್ ಕುಮಾರ್ ಪಿಸಿ ಹೇಮಂತ್ ಕುಮಾರ್ ರವರನ್ನು ನೇಮಿಸಿದ್ದು, ಸದರಿಯವರು ಆರೋಪಿ ಯ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿ 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಿನಾಂಕ: 22.06.2026 ರಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ನಿಟ್ಟೂರು ಎಂಬಲ್ಲಿ ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಂಡು ದಿನಾಂಕ:22.06.2026 ರಂದು ವಾರೆಂಟ್‌ನೊಂದಿಗೆ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಧೀಶರು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

0 ಕಾಮೆಂಟ್‌ಗಳು