ಸಾಲಿಗ್ರಾಮ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ

ಸಕಾಲಿಕ ಮಳೆ ಮತ್ತು ಸಮೃದ್ಧ ಬೆಳೆಗಾಗಿ ಜಗದೊಡೆಯ ಶ್ರೀ ಮದ್ಯೋಗಾನಂದ ಗುರು ನರಸಿಂಹ ಮತ್ತು ಪರಿವಾರ ದೇವತೆಗಳಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಸೀಯಾಳ ಅಭಿಷೇಕವನ್ನು ಅನೂಚಾನವಾಗಿ ದಿನಾಂಕ 15/06/26ರ ಸೋಮವಾರದಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಪ್ರಕಾಶ ಕಾರಂತರು, ಉಪಾಧ್ಯಕ್ಷ ಶ್ರೀ ಸಿ. ಚಂದ್ರ ಶೇಖರ ಉಪಾಧ್ಯ,ಕಾರ್ಯದರ್ಶಿ ಶ್ರೀ ಪರಶುರಾಮ ಭಟ್ಟರು, ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೆ. ತಾರಾನಾಥ ಹೊಳ್ಳ, ಶ್ರೀ ಪ್ರಸನ್ನ ತುಂಗ. ಮತ್ತು ಶ್ರೀ ಬಿ.ಜಿ ಕೃಷ್ಣಮೂರ್ತಿ ಮಯ್ಯ ಗ್ರಾಮ ಮೊಕ್ತೇಸರರು ಕೂ. ಮ .ಜ. ಸಾಲಿಗ್ರಾಮ (ರಿ) ಅಂಗಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಗುರು ನರಸಿಂಹ ಹಾಗೂ ಆಂಜನೇಯ ದೇವಸ್ಥಾನಕ್ಕೆ ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಸ್ವರೂಪ ಟಿ. ಕೆ. ಭೇಟಿ ನೀಡಿ, ಸೀಯಾಳಾಭಿಷೇಕದಲ್ಲಿ ಭಾಗವಹಿಸಿದರು. ದೇವಳದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು