ಹಳೆಯ ನೆನಪುಗಳನ್ನು ಪುನರುಜ್ಜೀವಿಸುವ ಪುನರ್ಮಿಲನ

ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ೧೯೮೫-೮೬ ನೆ ಸಾಲಿನ ವಿದ್ಯಾರ್ಥಿ- ಶಿಕ್ಷಕರ ಪುನರ್ಮ ಕಾರ್ಯಕ್ರಮ ಈಚೆಗೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ ಮಹಾಬಲೇಶ್ವರ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.ಶ್ರೀ ಮತಿ ಅಹಲ್ಯಾ ರಾವ್,ನಿರ್ಮಲಾ ರಾವ್ ಮತ್ತು ಶಶಿಕಲಾ ರಾಜವರ್ಮ ಅವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ದಿವಾಕರ ಶೆಟ್ಟಿ, ಶ್ರೀ ಅರುಣ್ ಶೆಟ್ಡಿ,ಶ್ರೀ ಪುತ್ತು ನಾಯಕ್, ಶ್ರೀ ಮತಿ ಚಿತ್ರಲೇಖಾ,ಶ್ರೀಮತಿ ರಾಜೇಶ್ವರಿ ಮತ್ತು ಶ್ರೀ ಮತಿ ಜಾಯ್ಸ್ ಡೇಸಾ ತಮ್ಮ ವಿದ್ಯಾರ್ಥಿ ದಿಸೆಯ ದಿನಗಳನ್ನು ನೆನೆಯುತ್ತ, ಪ್ರಾಧ್ಯಾಪಕರ ವಿದ್ವತ್ತು ಹಾಗೂ ಕರುಣೆಯನ್ನು ಕೊಂಡಾಡಿದರು.ಇದೇ ಸಂದರ್ಭದಲ್ಲಿ ಗುರುವಂದನೆ ಸಲ್ಲಿಸಲಾಯಿತು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡುತ್ತಾ ಹಳೆಯ ವಿದ್ಯಾರ್ಥಿಗಳು ಆಗಾಗ್ಗೆ ವಿದ್ಯಾಲಯಕ್ಕೆ ಭೇಟಿ ನೀಡಿ ಹಿಂದಿನ ದಿನಗಳನ್ನು ಮೆಲುಕು ಹಾಕುವುದು ಪ್ರಸ್ತುತ ಕಾರ್ಯ ನಿರ್ವಹಿಸುವವರಲ್ಲಿ ಹೊಸ ಹುರುಪನ್ನು ತುಂಬುತ್ತದೆ. ಹಳೆಯ ನೆನಪುಗಳು ಮರುಹುಟ್ಟು ಪಡೆದು ಮನಮುದಗೊಳ್ಳುತ್ತದೆ ಎಂದು ನುಡಿದರು.ಶ್ರೀ ಮತಿ ಅಹಲ್ಯಾ ರಾವ್ ಪ್ರಾರ್ಥನೆ ಹಾಡಿದರೆ ನಿರ್ಮಾಲಾ ರಾವ್ ಸ್ವಾಗತ ಕೋರಿದರು. ಶ್ರೀ ಮತಿ ನಳಿನಾದೇವಿ ಧನ್ಯವಾದ ಸಮರ್ಪಿಸಿದರು. ಶ್ರೀ ಹರಿಕೃಷ್ಣ ಹೊಳ್ಳ ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು