ದಿನಾಂಕ:13/07/2026 ರಂದು ಸಂಜೆ ಸಮಯ ಸುಮಾರು 4:00 ಗಂಟೆಗೆ ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬಂದ ಖಚಿತ ಮಾಹಿತಿಯ ಮೇರೆಗೆ ಸಂಜೆ 05:00 ಗಂಟೆಗೆ ಅಂಜಾರು ಗ್ರಾಮದ ಮೂಡು ಅಂಜಾರು ಕಲ್ಕುಡ ದೇವಸ್ಥಾನದ ಬಳಿ ತಲುಪಿ ಮರೆಯಲ್ಲಿ ನಿಂತು ನೋಡಿದಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 10 ರಿಂದ 15 ಜನರು ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ, ಅವುಗಳನ್ನು ಕಾಳಗಕ್ಕೆ ಬಿಟ್ಟು ಅವುಗಳಿಗೆ ಹಿಂಸೆಯನ್ನು ನೀಡುತ್ತಾ ಕಾಳಗದ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ಸಂಜೆ 05:10 ಗಂಟೆಗೆ ಸಿಬ್ಬಂದಿಯವರ ಮುಖೇನ ದಾಳಿ ಮಾಡಿದಾಗ ಕೆಲವರು ನಮ್ಮನ್ನು ನೋಡಿ ಕಾಳಗಕ್ಕೆ ಕಟ್ಟಿದ ಕೋಳಿಗಳ ಸಮೇತ ಓಡಿ ಹೋಗಿರುತ್ತಾರೆ. ಸ್ಥಳದಲ್ಲಿದ್ದ 8 ಜನ ಆರೋಪಿಗಳು, 8 ಮೋಟಾರ್ ಸೈಕಲ್ ಮತ್ತು 1 ಕಾರು ಹಾಗು ಆರೋಪಿತರಿಂದ 36,270 ರೂಪಾಯಿಗಳನ್ನು ವಶಕ್ಕೆ ಪಡೆದು ಹಿರಿಯಡಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 46/26 ಕಲಂ. 87 KP Act ಮತ್ತು 11(1)(a) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ ರಂತೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಬೆಳ್ಳಿಯಪ್ಪ.ಕೆ., ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪ ವಿಭಾಗ, ಗೋಪೀಕೃಷ್ಣ ರವರ ಪೊಲೀಸ್ ನಿರೀಕ್ಷಕರು ಬೃಹ್ಮಾವರ ವೃತ್ತ ರವರ ಮಾರ್ಗದರ್ಶನದಲ್ಲಿ ಪುನೀತ್ ಕುಮಾರ್ ಬಿ.ಇ ಪಿ.ಎಸ್.ಐ (ಕಾ&ಸು) ಮತ್ತು ವಿಠ್ಠಲ ಮಲವಡಕರ-ಪಿಎಸ್ ಐ(ತನಿಖೆ) ಹಿರಿಯಡಕ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಪ್ರವೀಣ್ ರೈ,ಪ್ರವೀಣ್ ಶೆಟ್ಟಿ, ,ಕೃಷ್ಣ ಪೂಜಾರಿ,ಉಲ್ಲಾಸ್ ,ಚನ್ನೇಶ, ಜೀಪ್ ಚಾಲಕ ಶಾಂತರಾಮ್ ಶೆಟ್ಟಿರವರು ದಾಳಿಯಲ್ಲಿ ಪಾಲ್ಗೋಂಡು ಆರೋಪಿತರನ್ನು ಹಿಡಿಯುವಲ್ಲಿ ಸ್ವತ್ತುಗಳನ್ನು ವಶಪಡಿಸಿಕೊಳ್ಳವಲ್ಲಿ ಭಾಗವಹಿಸಿರುತ್ತಾರೆ.

0 ಕಾಮೆಂಟ್‌ಗಳು