BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸಂಘ ಸಂಸ್ಥೆ

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ

ದಿನಾಂಕ 23.07.2026 ರಂದು ಬೆಳಿಗ್ಗೆ 9:30 ಗಂಟೆಗೆ ಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ಅಖಿಲ ಭಾರತ ಮಹಿಳಾ ಸೌಂದಯರ್ಯ ತಜ್ಞೆಯರ ವೃತ್ತಿ ಸಂಘ (ರಿ ), ಇವರ ಸಹಯೋಗದಲ್ಲಿ, ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನ, ಉಡುಪಿ ಇಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು.

 ಉಡುಪಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಶ್ರೀ ಕಮಲ್ ಷಾ ಅಲ್ತಾಫ್ ಅಹಮದ್ ರವರು ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಸೇರಿದಂತೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಉಡುಪಿ 1 ನೇ ವೃತ್ತದ ಕಾರ್ಮಿಕ ನಿರೀಕ್ಷಕರು ಶ್ರೀ ಎನ್ ಪಿ ಎಲ್ ಸಂಜಯ್, ಉಡುಪಿ 2 ನೇ ವೃತ್ತದ ಕಾರ್ಮಿಕ ನಿರೀಕ್ಷಕರು ಶ್ರೀ ಮಲ್ಲಿಕ್ ಪ್ರಸಾದ್ ಎನ್ ಎಸ್, ಕುಂದಾಪುರ ವೃತ್ತದ ಕಾರ್ಮಿಕ ನಿರೀಕ್ಷಕರು ಶ್ರೀ ವಿಜೇಂದ್ರ ಕೆ, ಕಾರ್ಕಳ ವೃತ್ತದ ಕಾರ್ಮಿಕ ನಿರೀಕ್ಷಕರು ಶ್ರೀ ನವೀನ್ ಕುಮಾರ್ ರವರುಗಳು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಸೇರಿದಂತೆ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಅಖಿಲ ಭಾರತ ಮಹಿಳಾ ಸೌಂದರ್ಯ ತಜ್ಞರ ವೃತ್ತಿ ಸಂಘದ ಅಧ್ಯಕ್ಷೆ ಶ್ರೀಮತಿ ಮರಿಯಾ ಹೆರಾಲ್ಡ್ ರವರು 'ನಮ್ಮ ಟ್ರೇಡ್ ಯೂನಿಯನ್ ನ ಉದ್ದೇಶ ಕೇವಲ ಸದಸ್ಯರನ್ನು ಸೇರಿಸುವುದುಲ್ಲ : ಪ್ರತಿಯೊಂದು ಮಹಿಳಾ ಸೌಂದರ್ಯ ತಜ್ಞೆಯೂ ಆತ್ಮವಿಶ್ವಾಸ, ಗೌರವದಿಂದ ಮತ್ತು ಸುರಕ್ಷಿತವಾಗಿ ವೃತ್ತಿ ನಡೆಸಬೇಕು ಸಂಘಟನೆ ವ್ಯಕ್ತಿ ಆಧಾರಿತ ಆಗದೆ ತತ್ವ ಆಧಾರಿತ ಆಗಬೇಕು ಅಧಿಕಾರ, ಹುದ್ದೆ, ಅಲಂಕಾರ ಅಹಂಕಾರಕ್ಕೆ ಅಲ್ಲ ಎಂದು ಎಲ್ಲರೂ ಅರಿಯಬೇಕು. ಸವಲತ್ತು ಅವಕಾಶ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎನ್ನುವುದು ಮೂಲ . ಈ ಸ್ಮಾರ್ಟ್ ಕಾರ್ಡ್ ಮೂಲಕ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆಯುವ ಅವಕಾಶ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬ ನಮ್ಮ ವ್ರತ್ತಿ ಸಂಘದ ಸದಸ್ಯೆ ಇದರ ಮಹತ್ವವನ್ನು ಅರಿತು ಇದರ ಸದುಪಯೋಗ ಪಡೆಯಬೇಕು ಎಂದರು. ಉಡುಪಿ ಜಿಲ್ಲಾ ಟೈಲರ್ ಸಂಘದ ಅಧ್ಯಕ್ಷ ಶ್ರೀ ದಯಾನಂದ ಕೋಟ್ಯಾನ್ ರವರು ಮೊದಲು ಸಂಘಟನೆ ಬಲಗೊಳಿಸುವುದು ತುಂಬಾ ಅಗತ್ಯವಾಗಿದೆ ಸರ್ಕಾರದಿಂದ ಸಿಗುವ ನಾನಾ ಸೌಲಭ್ಯಗಳನ್ನು ಪಡೆಯಲು ಸಂಘಟನೆಯಿಂದ ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಿಬ್ಬಂದಿಗಳು, ಗ್ರಾಮ ಒನ್ ಮತ್ತು ಸಿ.ಎಸ್.ಸಿ ರವರೊಂದಿಗೆ ಬ್ಯೂಟಿ ಪಾರ್ಲರ್ ವೃತ್ತಿಯ ಒಟ್ಟು 258 ಕಾರ್ಮಿಕರನ್ನು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಆನ್ ಲೈನ್ ನಲ್ಲಿ ನೋಂದಾಯಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳಿಂದ ಕೇಂದ್ರ ಸರ್ಕಾರದ ಯೋಜನೆಗಳಡಿ ಕಾರ್ಮಿಕರನ್ನು ನೋಂದಾಯಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೇದ ಸುವರ್ಣ, ಕೋಶಾಧಿಕಾರಿ ಶ್ರೀಮತಿ ಭಾರತಿ ಶ್ರೀ ಯಾನ್, ಕಾರ್ಯಕ್ರಮದಲ್ಲಿ ಅಖಿಲಾ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಉಡುಪಿ ಸ್ಥಾಪನ ಜೊತೆ ಕಾರ್ಯದರ್ಶಿ ಶ್ರೀಮತಿ ಲತಾ ವಾದಿರಾಜ್, ಉಡುಪಿ ಜಿಲ್ಲಾಧ್ಯಕ್ಷೇ ಶ್ರೀಮತಿ ಸುನೀತಾ ಗಣೇಶ್, ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ದಿನೇಶ್, ಸಂಘದ ಸದಸ್ಯರುಗಳು, ಪತ್ರಿಕಾ ಮಾಧ್ಯಮದವರು ಮತ್ತಿತರರು ಉಪಸ್ಥಿತರಿದ್ದರು, ಖಜಾಂಜಿ ಶ್ರೀಮತಿ ಗೀತಾ ದಯಾನಂದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!