ಎಸ್.ವಿ.ಎಚ್.ಕನ್ನಡ ಮಾಧ್ಯಮ ಪ್ರೌಢಶಾಲೆ ಇನ್ನಂಜೆಯಲ್ಲಿ ೨೦೨೬-೨೭ನೇ ಸಾಲಿನ ಪ್ರೌಢ ಶಾಲಾ ವಿದ್ಯಾರ್ಥೀ ಸಂಸತ್ತಿನ ಉದ್ಘಾಟನೆಯನ್ನು ಶ್ರೀಮತಿ ಸಜಾತ ಶೆಟ್ಟಿ, ನಿವೃತ್ತ ಶಿಕ್ಷಕಿ, ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆ, ಉಡುಪಿ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳು ಪ್ರಾಮಾಣಿಕತೆ, ಸಮಯ ಪಾಲನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಐ.ಎಲ್.ರಘುಪತಿ ಭಟ್, ನಿವೃತ್ತ ಪ್ರಾಚಾರ್ಯರು, ಎಸ್.ವಿ.ಎಚ್.ಪ.ಪೂ.ಕಾಲೇಜು, ಇನ್ನಂಜೆ ಹಾಗೂ ಶಶಿಕಲಾ ಆರ್ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ೮ನೇ ತರಗತಿಗೆ ಐ.ಎಲ್.ರಘುಪತಿ ಭಟ್ ದಂಪತಿಗಳು ನೀಡಿದ ನೋಟ್ ಬುಕ್ ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿವಿಧ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಸಂಸತ್ತಿನ ನಾಯಕಿಯಾಗಿ ತೇಜಸ್ವಿನಿ, ಹಾಗು ಉಪನಾಯಕನಾಗಿ ಚಿರಾಗ್ ಅಧಿಕಾರ ಸ್ವೀಕರಿಸಿದರು. ಶಾಲಾ ಮುಖ್ಯೋಪಾದ್ಯಾಯ ನಟರಾಜ ಉಪಾದ್ಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಶಾಲಾ ಸಂಸತ್ತನ ಸದಸ್ಯರು ತಮ್ಮ ಕರ್ತವ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು ಹೇಳಿದರು. ನವೀನ್ ಶೆಟ್ಟಿ ಸ್ವಾಗತಿಸಿ, ಅನಿತಾ ವೀರ ಮಥಾಯಸ್ ಪ್ರಮಾಣವಚನ ಬೋದಿಸಿದರು. ಶಶಿಕಲಾ ಧನ್ಯವಾದ ನೀಡಿದರು. ಡಾ. ಯೋಗೇಶಪ್ಪ ಕಾರ್ಯಕ್ರಮ ನಿರೂಪಿಸಿದರು.

0 ಕಾಮೆಂಟ್‌ಗಳು