ಉಡುಪಿ ಹಿರಿಯ ನಾಗರಿಕರ ಸಂಸ್ಥೆಯ ಆಶ್ರಯದಲ್ಲಿ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಯ ಕುರಿತು ಆಯುರ್ವೇದ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಭಾರತೀಯ ರೆಡ್ ಕ್ರಾಸ್ ಭವನ, ಉಡುಪಿ ಇಲ್ಲಿ ಜರುಗಿತು.ಸಂಪನ್ಮೂಲ ವ್ಯಕ್ತಿ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಎಲುಬು/ಮೂಳೆ ತಪಾಸಣೆ ಯನ್ನು ಮಣಿಪಾಲ ರಗ್ದಿಮಾ ಆರೋಗ್ಯ ಚಿಕಿತ್ಸಾ ಕೇಂದ್ರದ ಡಾಕ್ಟರ್ ದಿವ್ಯ ಪ್ರಸನ್ನ ಮತ್ತುಡಾಕ್ಟರ್ ರಮೇಶ್ ಮತ್ತು ತಂಡ ಇವರು ನಡೆಸಿಕೊಟ್ಟರು.
ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಕೆ.ಮುರಳೀಧರ ಸ್ವಾಗತ ಮತ್ತು ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ಜಯ ತಂತ್ರಿ ನಿರೂಪಣೆ ಹಾಗೂ ಕಾರ್ಯದರ್ಶಿ ನಂದ ಕುಮಾರ್ ಧನ್ಯವಾದಗೈದರು. ಡಾಕ್ಟರ್ ಚಂದನ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಹರಿದಾಸ ನಾಯಕ್, ಕೋಶಾಧಿಕಾರಿ ಉಮೇಶ ರಾವ್ ಮತ್ತು ಗೌರವಾಧ್ಯಕ್ಷ ಸದಾನಂದ ಹೆಗ್ಡೆ ಉಪಸ್ಥಿತರಿದ್ದರು. ರಾಜಶ್ರೀ ಶೆಟ್ಟಿ ಆರಂಭದಲ್ಲಿ ಪ್ರಾರ್ಥನೆಗೈದರು.

0 ಕಾಮೆಂಟ್‌ಗಳು