ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾ. ಶಾಲೆಯಲ್ಲಿ ೨೦೨೬-೨೭ನೇ ಸಾಲಿನ ಶಾಲಾ ಸಂಸತ್ತನ್ನು ಮುಖ್ಯ ಅತಿಥಿ ಉದ್ಯಾವರ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಶ್ರೀಯುತ ರೋಯ್ಸ್ ಫರ್ನಾಂಡಿಸ್‌ರವರು ಉದ್ಘಾಟಿಸಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮಹತ್ವವನ್ನು ವಿವರಿಸಿದರು. ಶಾಲಾ ಸಂಚಾಲಕರಾದ, ವಂದನೀಯ ಧರ್ಮಗುರುಗಳಾದ ಅನಿಲ್ ಡಿ’ಸೋಜ಼ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಚುನಾಯಿತ ಸಂಸತ್ತಿನ ಎಲ್ಲಾ ಸದಸ್ಯರಿಗೂ ಶುಭ ಹಾರೈಸಿ ಮಾರ್ಗದರ್ಶನ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪಾ ತಾವ್ರೊರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ನಾಯಕಿಯಾಗಿ ಸಾಶಾ ಝಾರಾ ಫರ್ನಾಂಡಿಸ್ ಅಧಿಕಾರ ಸ್ವೀಕರಿಸಿದರು. ಸಹಶಿಕ್ಷಕಿ ಶ್ರೀಮತಿ ದಿವ್ಯಶ್ರೀ ಸ್ವಾಗತಿಸಿದರು. ಸಂಸತ್ತಿನ ಕಾರ್ಯದರ್ಶಿ ಆಯೇಷಾ ಹನೀನ್ ವಂದಿಸಿದರು. ಸಹಶಿಕ್ಷಕ ಶ್ರೀ ಅನಿಲ್ ಕುಮಾರ್ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.

0 ಕಾಮೆಂಟ್‌ಗಳು