ಕೃಷ್ಣವೇಷ ಸ್ಪರ್ಧೆಯೊಂದಿಗೆ ಕುಣಿತ ಭಜಕರ ಸಮಾಜ ಸೇವೆ ಈ ಕಾರ್ಯಕ್ರಮದಲ್ಲಿ ಉಳಿದ ಹಣವನ್ನು ಸಹಾಯದ ನಿರೀಕ್ಷೆಯಲ್ಲಿರುವ ಅಶಕ್ತ ಕುಟುಂಬಕ್ಕೆ ನೀಡಲಾಗುವುದು. ಗಾಳಿ ಮಳೆಯನ್ನು ಎದುರಿಸಲಾಗದ ಮನೆಯೊಂದರಲ್ಲಿ ತಾಯಿ ಮಗಳು ವಾಸವಾಗಿದ್ದಾರೆ. ದುಡಿಯುವ ಕೈಗಳಲ್ಲಿದ ಈ ಮನೆಗೆ ನಾವೆಲ್ಲರೂ ಬೆಳಕಾಗಬೇಕಿದೆ. ಬೀಳುವ ಪರಿಸ್ಥಿತಿಯಲ್ಲಿರುವ ಈ ಮನೆಯ ದುರಸ್ಥಿ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕಿದೆ. ಆ ಕುಟುಂಬದ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಯ ಜೊತೆಗೆ ಅವರಿಗೆ ನೆಲೆಸಲು ಸೂಕ್ತ ಮನೆಯ ನಿರ್ಮಾಣ ಕಾರ್ಯಕ್ಕೆ ನಮ್ಮದೊಂದು ಅಳಿಲು ಸೇವೆ. ಆದುದರಿಂದ ಮುದ್ದುಕೃಷ್ಣ ಸ್ಪರ್ಧೆಯ ಜೊತೆಗೆ ಈ ಸಮಾಜಸೇವೆಯ ಕಾರ್ಯಕ್ಕೆ ತಮ್ಮೆಲ್ಲರ ತನು-ಮನ-ಧನದ ನಿರೀಕ್ಷೆಯಲ್ಲಿದ್ದೇವೆ.
ನಮ್ಮೊಂದಿಗೆ ಕೈ ಜೋಡಿಸಿ-
ಕಳೆದ ವರುಷ ನಾವು ಕ್ಯಾನ್ಸರ್ ನ ಚಿಕಿತ್ಸೆಗಾಗಿ ಒಬ್ಬ ಮಹಿಳೆಗೆ ಧನಸಹಾಯ ಮಾಡಿದ್ದೇವೆ. ಇಲ್ಲಿಯವರೆಗೆ ನಮ್ಮ ಕುಣಿತ ಭಜನಾ ತಂಡವು ಸುಮಾರು 1.5 ಲಕ್ಷಕ್ಕೂ ಅಧಿಕ ಮೊತ್ತವನ್ನು ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸಿದೆ.

