ಶ್ರೀ ಕೃಷ್ಣ ಬಾಲನಿಕೇತನದಲ್ಲಿ ಗುರು ಪೂರ್ಣಿಮೆಯನ್ನು ಮಕ್ಕಳು, ಆಡಳಿತ ಮಂಡಳಿ ಸದಸ್ಯರು, ಶಾಲೆಗಳ ಶಿಕ್ಷಕರ ಜೊತೆ ಆಚರಿಸಲಾಯಿತು. ಸಂಸ್ಕ್ರತ ಮಹಾಪಾಠಶಾಲೆಯ ವೇದಾಂತ ಪ್ರಾಧ್ಯಾಪಕ ವಿದ್ವಾನ್ ನರಹರಿ ಆಚಾರ್ಯರು ಗುರುಪೂರ್ಣಿಮೆಯ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು. ಪ್ರಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ ರು. ಎಲ್ಲರನ್ನೂ ಸ್ವಾಗತಿಸಿದರು. ಇಂದಿರಾನಗರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಗಿರೀಶ್ ನಾಯ್ಕ, ಕುಕ್ಕಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾರತ್ನ ಮತ್ತು ಶಾಲೆಗಳ ಎಲ್ಲಾ ಶಿಕ್ಚಕರನ್ನು ಮತ್ತು ಸಂಸ್ಥೆಯ ಮಾತಾಜಿಯವರನ್ನು ಮಕ್ಕಳು ಗೌರವಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರೊ. ಕಮಲಾಕ್ಷರು ಮುಖ್ಯ ಅತಿಥಿಗಳನ್ನು ಗೌರವಿಸಿದರು. ಶ್ರೀ ಗುರುರಾಜ ಭಟ್ಟರು ದನ್ಯವಾದ ಸಮರ್ಪಿಸಿದರು.

0 ಕಾಮೆಂಟ್‌ಗಳು