ಸಿದ್ದಾಪುರ: ಸಿದ್ದಾಪುರ ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆಯು ಅನುಭವ ಮಂಟಪ ಕಟ್ಟಡದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ್ತ ಉಪನ್ಯಾಸಕ ಶ್ರೀ ಶಶಿಧರ ಶೆಟ್ಟಿಯವರು ಹಿರಿಯ ನಾಗರಿಕರು ಸಮಾಜದಲ್ಲಿ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಂಡು ನಿಜವಾದ ಅರ್ಥದಲ್ಲಿ ಹಿರಿಯರೆಂಬ ಗೌರವ ಪಡೆಯಬೇಕು. ಕುಟುಂಬದಿಂದಲೇ ಇದು ಆರಂಭವಾಗಿ ಸಮಾಜದಲ್ಲಿಯೂ ಉತ್ತಮ ಸ್ಥಾನ ಪಡೆಯುವ ಮೌಲ್ಯಗಳನ್ನು ಅಳವಡಿಸಿ ಕೊಳ್ಳಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷರಿಗಿರುವ ಎಚ್. ಭೋಜ ಶೆಟ್ಟಿಯವರು ವಹಿಸಿದ್ದರು. ಕಾರ್ಯದರ್ಶಿ ಶ್ರೀ ದಿನಕರ ತೋಳಾರ್ ಸ್ವಾಗತಿಸಿ, ಶ್ರೀ ಶೇಖರ ಶೆಟ್ಟಿ ವಂದಿಸಿದರು. ಶ್ರೀ ಕಡ್ರಿ ಚಂದ್ರಶೇಖರ ಶೆಟ್ಟಿ ನಿರೂಪಿಸಿದರು.

0 ಕಾಮೆಂಟ್‌ಗಳು