ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇ|ಮೂ| ವಿಖ್ಯಾತ್ ಭಟ್, ಗಣೇಶ ಸರಳಾಯರ ನೇತೃತ್ವದಲ್ಲಿ ಅ.11ರಿಂದ 21ರ ತನಕ ಶರನ್ನವರಾತ್ರಿ ಮಹೋತ್ಸವ ನೆರವೇರಲಿದೆ.
ದಿನಂಪ್ರತಿ ಊರ ಹಾಗೂ ಪರವೂರ ಭಕ್ತರ ಸೇವಾರೂಪದ ಜೋಡಿ ಚಂಡಿಕಾಯಾಗ, ಸಹಸ್ರನಾಮಾರ್ಚನೆ, ಕಲ್ಪೋಕ್ತ ಪೂಜೆ, ಶ್ರೀರಂಗ ಪೂಜೆ, ಶ್ರೀ ದುರ್ಗಾ ನಮಸ್ಕಾರ ಪೂಜೆ, ದೀಪಾರಾಧನೆ ಜರಗಲಿದೆ. ಅ.13ರಂದು ಶ್ರೀ ಕುಬೇರ ಚಿತ್ರಲೇಖ ಸಹಿತ ಮಹಾಲಕ್ಷ್ಮೀ ಸಾನ್ನಿಧ್ಯದಲ್ಲಿ ಶ್ರೀ ಲಕ್ಷ್ಮೀ ಸಹಸ್ರನಾಮ ಪಾಯಸ ಹೋಮ, ಸಂಜೆ 6ರಿಂದ ದೀಪಾರಾಧನೆ ಸಹಿತ ರಂಗಪೂಜೆ, ಅ.15 ಹಾಗೂ ಅ.16ರಂದು ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿ ಮಹಾಯಾಗ, ಅ.20ರಂದು ಶ್ರೀ ಪಂಚಮುಖಿ ಗಾಯತ್ರಿ ದೇವಿ ಸಾನ್ನಿಧ್ಯದಲ್ಲಿ ಶ್ರೀ ಗಾಯತ್ರಿ ಮಂತ್ರ ಹೋಮ, ಅ.21ರ ವಿಜಯದಶಮಿ ಪರ್ವಕಾಲದಲ್ಲಿ ಕ್ಷೇತ್ರದ ವತಿಯಿಂದ ತ್ರಿಕುಂಡ ತ್ರಿಚಂಡಿಕಾ ಯಾಗ, ಸಂಜೆ 6ರಿಂದ ಬಲಿಉತ್ಸವ, ಪಲ್ಲಕಿ ಉತ್ಸವ, ವಸಂತ ಪೂಜೆ, ಆರಾಧನಾ ರಂಗಪೂಜಾ ಮಹೋತ್ಸವ, ಮಹಾಮಂತ್ರಾಕ್ಷತೆಯು ನಿರಂತರ ಅನ್ನಸಂತರ್ಪಣೆಯೊಂದಿಗೆ ಜರಗಲಿದೆ.
ಅ.11ರ ಬೆಳಗ್ಗೆ 7ಕ್ಕೆ ಕದಿರು ಕಟ್ಟುವಿಕೆಯಿಂದ ನವರಾತ್ರಿ ಆರಂಭಗೊಳ್ಳಲಿದೆ. ಪ್ರತಿದಿನ ಲಲಿತಾ ಸಹಸ್ರನಾಮ ಪಠನೆ, ಲಕ್ಷ್ಮೀ ಶೋಭಾನೆ ನೆರವೇರಲಿರುವುದು. ಪ್ರತಿದಿನ ವಿದ್ಯಾರಂಭ (ಅಕ್ಷರಾಭ್ಯಾಸ) ಹಾಗೂ ತುಲಾಭಾರ ಸೇವೆ ನಡೆಯಲಿದೆ. ಮಕ್ಕಳಿಗೆ ವಿದ್ಯಾರಂಭ ಮಾಡಿಸುವವರು ಹಾಗೂ ಗಾನ-ನಾಟ್ಯ-ನಾದ ಪ್ರಿಯಳ ಸಾನ್ನಿಧ್ಯದಲ್ಲಿ ವಿಶೇಷ ಸೇವೆಯಾಗಿ ಪರಿಗಣಿಸಲ್ಪಡುವ ಕಲಾಸೇವೆಯನ್ನು ಸಮರ್ಪಿಸುವ ಕಲಾವಿದರು ಕ್ಷೇತ್ರವನ್ನು ಸಂಪರ್ಕಿಸಲು ಉಸ್ತುವಾರಿ ಕುಸುಮಾ ನಾಗರಾಜ ಆಚಾರ್ಯ ತಿಳಿಸಿದ್ದಾರೆ.
