BREAKING
ಸುದ್ದಿ

ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ‘ಶ್ರೀ ಮಹಾಧನ್ವಂತರಿ ಯಾಗ’ದ ಸಿದ್ಧತೆ: ಕಾರ್ಯಾಲಯದ ಶುಭಾರಂಭ!

ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಶ್ರೀ ಮಹಾಧನ್ವಂತರಿ ಯಾಗ’ದ ಪ್ರಚಾರ ಹಾಗೂ ಪೂರ್ವಸಿದ್ಧತೆಗಳಿಗಾಗಿ ಪೇಜಾವರ ಮಠದ ಹಿಂಭಾಗದಲ್ಲಿ ನೂತನವಾಗಿ ಆರಂಭಿಸಲಾದ ಕಾರ್ಯಾಲಯದ ಉದ್ಘಾಟನಾ ಸಮಾರಂಭವು ದಿನಾಂಕ 9 ನವೆಂಬರ್ 2026 ರಂದು ಸಂಜೆ ಅತ್ಯಂತ ಭಾವಪೂರ್ಣ ಮತ್ತು ದಿವ್ಯ ವಾತಾವರಣದಲ್ಲಿ ನೆರವೇರಿತು. ಪ್ರಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿಯ ಸಂಚಾಲಕರಾದ ಶ್ರೀ.ಗುರುಪ್ರಸಾದ್ ಗೌಡ ಅವರು, ಈಗಾಗಲೇ ಯಾಗದ ಸಿದ್ಧತೆಗಳಿಗಾಗಿ ಮೂರು ಪೂರ್ವಭಾವಿ ಸಭೆಗಳು ನಡೆದಿದ್ದು, ಯಾಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು, ಧರ್ಮಪ್ರೇಮಿಗಳು ಕೈಜೋಡಿಸಿದ್ದಾರೆ.ಆ ನಿಟ್ಟಿನಲ್ಲಿ ಯಾಗದ ಪ್ರಸಾರ ಕಾರ್ಯ ಇನ್ನೂ ವೇಗವಾಗಿ ನಡೆಯಲು ಒಂದು ತಾತ್ಕಾಲಿಕ ಕಚೇರಿಯನ್ನು ಮಾಡಿ,ಅದರ ಮೂಲಕ ಪ್ರತಿ ದಿನವೂ ಎಲ್ಲರೂ ಸೇರಿ ಯಾಗ ಕಾರ್ಯಕ್ರಮದ ಪ್ರಸಾರ ಮತ್ತು ಇತರ ಸಿದ್ಧತೆಗಳ ವೇಗವನ್ನು ಹೆಚ್ಚಿಸಬಹುದು ಮತ್ತು ಅದಕ್ಕಾಗಿ ಇವತ್ತು ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ನಡೆಯುತ್ತಿದೆ ಎಂದು ತಿಳಿಸಿದರು.

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಕಾರ್ಯಾಲಯವನ್ನು ಉದ್ಘಾಟಿಸಿ ಆಶೀರ್ವದಿಸಿದರು. ಈ ಶುಭ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಸ್ವಾಮೀಜಿಯವರು, "ಲೋಕಕಲ್ಯಾಣ ಹಾಗೂ ಧರ್ಮಸಂಸ್ಥಾಪನೆಯ ಉದ್ಧೇಶದಿಂದ ನಡೆಯುವ ಇಂತಹ ಸಾತ್ತ್ವಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮತೇಜಸ್ಸನ್ನು ಹೆಚ್ಚಿಸುತ್ತವೆ. ಸಾರ್ವಜನಿಕರ ಆರೋಗ್ಯ ವೃದ್ಧಿ ಮತ್ತು ಸದ್ಭಾವನೆಗಾಗಿ ಹಮ್ಮಿಕೊಳ್ಳಲಾಗಿರುವ ಈ ಮಹಾಯಾಗವು ಯಶಸ್ವಿಯಾಗಿ ನೆರವೇರಲಿ," ಎಂದು ಶುಭಹಾರೈಸಿದರು.

ಉಡುಪಿಯಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಈ ಮಹಾ ಧನ್ವಂತರಿ ಯಾಗದ ಲಾಭವನ್ನು ಪ್ರತಿಯೊಬ್ಬ ಧರ್ಮಾಭಿಮಾನಿಯೂ ಪಡೆದುಕೊಳ್ಳಬೇಕು ಮತ್ತು ಈಗಾಗಲೇ ಸುಮಾರು 6 ಸಾವಿರಕ್ಕಿಂತಲೂ ಹೆಚ್ಚು ಜನರು ಯಾಗಕ್ಕೆ ಬರಲು ತಮ್ಮ ನೋಂದಣಿ ಮಾಡಿದ್ದಾರೆ ಎಂದು ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಅವರು ತಿಳಿಸಿದರು.

ಯಾಗ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ವಿಜಯ ಕೊಡವೂರು ಅವರು ಮಾತನಾಡಿ, ಸಮಾಜದ ಎಲ್ಲಾ ಸಂಘಟನೆಗಳನ್ನು ಆಮಂತ್ರಿಸಲು ಹೇಗೆ ನಿಯೋಜನೆಯನ್ನು ಮಾಡಿದ್ದೇವೆ ಮತ್ತು ಅದನ್ನು ಕಾರ್ಯರೂಪಕ್ಕೆ ಹೇಗೆ ತರಬೇಕು ಎಂಬುವುದರ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ , ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ. ವಿಜಯ ಕೊಡವೂರು, ಆಯೋಜನಾ ಸಮಿತಿಯ ಸಂಚಾಲಕರಾದ ಶ್ರೀ. ಗುರುಪ್ರಸಾದ್ ಗೌಡ ಹಾಗೂ ಹಲವಾರು ಧರ್ಮಾಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


ಕಾರ್ಯಾಲಯದ ವಿಳಾಸ:

ಪೇಜಾವರ ಮಠದ ಹಿಂಬಾಗ, ಕ್ಯಾಸೆಟ್ ಕಾರ್ನರ್ ಹತ್ತಿರ.

ಸಂಪರ್ಕ: 9343017001


ತಮ್ಮ ವಿಶ್ವಾಸಿ,

*ಶ್ರೀ. ವಿನೋದ್ ಕಾಮತ್, ಸನಾತನ ಸಂಸ್ಥೆ, ಸಂಪರ್ಕ: 9342599299*

*ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿ, ಸಂಪರ್ಕ: 9343017001*


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Panchamai Trust

Panchamai Trust

Malabar Gold

Malabar Gold

RAVIRAJ HP

RAVIRAJ HP
HAPPY DEEPAVALI

bjp

bjp

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts

Shirur matha

Shirur matha
Shirur matha
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!